Home News ಸಾಯಂಕಾಲ ಯೋಗ ಶಿಬಿರ ಪೂರ್ವಭಾವಿ ಸಭೆ

ಸಾಯಂಕಾಲ ಯೋಗ ಶಿಬಿರ ಪೂರ್ವಭಾವಿ ಸಭೆ

by vegadhut@gmail.com.
0 comments

ಸಿಂದಗಿ: ತಾಲೂಕಿನ ಎಲ್ಲ ಜನತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವೃದ್ಧಿಗಾಗಿ ಸದೃಢ ದೇಹ ಹಾಗೂ ಸದೃಢ ಮನಸಿನ ಪರಿಕಲ್ಪನೆ ಇಟ್ಟುಕೊಂಡು ಸಿಂದಗಿ ನಗರದಲ್ಲಿ ಶೀಘ್ರದಲ್ಲಿಯೇ ಬೃಹತ್ ಪ್ರಮಾಣದ ಯೋಗ ಶಿಬಿರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕ   ಅಶೋಕ ಮನಗೂಳಿ ತಿಳಿಸಿದ್ದಾರೆ.  

ಸಾತ್ವಿಕರು, ಮಹಾನ್ ದೈವಭಕ್ತರು ನುರಿತ ಯೋಗ ಗುರುಗಳಾದ   ಹಿಮಾಲಯನ್ ಧ್ಯಾನ ಯೋಗಗುರು ಪರಮಪೂಜ್ಯ ಶ್ರೀ ನಿರಂಜನ ಸ್ವಾಮಿಗಳು ಶಿಬಿರವನ್ನು ನಡೆಸಿಕೊಡಲಿದ್ದಾರೆ. 

ಕಾರಣ ಈ ಯೋಗ ಶಿಬಿರದ ಆಯೋಜನೆಯ ಪೂರ್ವಭಾವಿಯಾಗಿ ಇಂದು ಬುಧವಾರ  ಸಾಯಂಕಾಲ 4:30 ಗಂಟೆಗೆ ಪಟ್ಟಣದ ಬಸವ ಮಂಟಪದಲ್ಲಿ ಶಾಸಕ ಅಶೋಕ್ ಮನಗೂಳಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. 

banner

ಸಿಂದಗಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಹಿರಿಯ ನಾಗರಿಕರು ಹಾಗೂ ಯೋಗಾಸಕ್ತರು ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಚರ್ಚೆ ಹಾಗೂ ಸಲಹೆ ಸೂಚನೆಗಳನ್ನು ನೀಡಲು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಯೋಗೋತ್ಸವ ಸಮಿತಿ  ವಿನಂತಿಸಲಾಗುವುದೆಂದು  ತಿಳಿಸಿ ಪ್ರಕಟಣೆ ನೀಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news