Home News ಶಾಂತವೀರರ ಮದ್ಯೆ ಚುರುಕುಗೊಂಡ ಕುರ್ಚಿ ಕದನ

ಶಾಂತವೀರರ ಮದ್ಯೆ ಚುರುಕುಗೊಂಡ ಕುರ್ಚಿ ಕದನ

by vegadhut@gmail.com.
0 comments

ಸಿಂದಗಿ ಪುರಸಭೆಗೆ ಶಾಂತವೀರ ಅಧ್ಯಕ್ಷನಾಗುವುದು ಬಹುಶಃ ನಿಶ್ಚಿತ ವಾದಂತೆ ಸ್ಪಷ್ಟತೆಯ ಬೆಳವಣಿಗೆ ಕಳೆದ ಎರಡು ದಿನದಲ್ಲಿ ನಡೆದಿರುವುದು ಕಂಡು ಬಂದಿದೆ.

ಸಿಂದಗಿ : ಪುರಸಭೆಗೆ ನಾಳೆ ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ  ಹಲವು ದಿನಗಳಿಂದ ಕೂತುಹಲ ಮೂಡಿಸಿದರು ನಾಳೆ ಶಾಂತವೀರ ಅಧ್ಯಕ್ಷನಾಗುವುದು ಕಚಿತವಾಗಿದೆ. ಆದರೆ ಯಾವ ಶಾಂತವೀರ ಗೇಲ್ಲುತ್ತಾರೆ ಎಂಬುದು ಗೌಪ್ಯವಾಗಿದೆ. ಶಾಂತವೀರ ಬಿರಾದಾರ ಈಗಾಗಲೇ ಹಲವು ಸದಸ್ಯರನ್ನು ಕರೆದುಕೊಂಡು ಹೋಗಿದ್ದು  ಹನ್ನೊಂದು  ಸದಸ್ಯರ  ಬಹುಮತವಿದೆ ಎಂಬುದು ತಿಳಿದು ಬಂದಿದೆ.  ಆದರೆ ಅವರ ನೇರ ಸ್ಪರ್ಧಾಳು ಮಾಜಿ ಅಧ್ಯಕ್ಷ ಶಾಂತವೀರ ಮನಗೂಳಿ ಹತ್ತಿರ ಒಂಬತ್ತು  ಸದಸ್ಯರಿದ್ದು   ಮೂರು ಸದಸ್ಯರ ಶಾಸಕರ ಪರವಾಗಿ ನಿಂತಿದ್ದು ಕೊನೆಗೆ‌ ಶಾಸಕ ಅಶೋಕ ಮನಗೂಳಿ ಯಾರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದರು ಅವರು ಅಧ್ಯಕ್ಷರಾಗುವುದು ಖಚಿತವಾಗುವುದೆಂದು ಜನರು ಅಭಿಪ್ರಾಯ  ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆ ಅಖಾಡದಿಂದ ಹಿಂದೇಟು ಹಾಕಿದ್ರಾ ಹಣಮಂತ ಸುಣಗಾರ?

banner

ಮತ್ತೋಮ್ಮೆ  ಅಧ್ಯಕ್ಷ ಗಾದಿಯ ಕನಸು ಕಂಡಿದ್ದ. ಹಣಮಂತ ಸುಣಗಾರ ಅವರಿಗೆ   ಅನುಕಂಪದ ಅಲೆ ಇತ್ತು. ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಬೆಂಬಲವು ಇತ್ತು.  ಆದರೆ  ಅವರು ಕರೆದ ಸಭೆ ವಿಫಲಗೋಳಿಸಲು ಕೆಪಿಸಿಸಿ ಅಸ್ತ್ರ ಬಳಸಿದರೆ ಇತ್ತ ಅವರದೆ ಸಮಾಜದ  ಮೂರು ಸದಸ್ಯರಾದ ಮಹಾದೇವಿ ನಾಯ್ಕೋಡಿ, ಕಲಾವತಿ ಕಡಕೋಳ, ಮತ್ತು ಬಸವರಾಜ ಯರನಾಳ ಶಾಂತವೀರ ಬಿರಾದಾರ ಅವರ ಬಣದೊಂದಿಗೆ ಸದ್ಯಕ್ಕೆ ಗುರುತಿಸಿಕೊಂಡಿದ್ದಾರೆ. ಹಣಮಂತ  ಸುಣಗಾರ ಅವರು ಚುನಾವಣೆ ಅಖಾಡದಿಂದ ಹಿಂದೆ ಸರಿದು ವೈದ್ಯ ಶಾಂತವೀರ ಮನಗೂಳಿ ಅಧ್ಯಕ್ಷರಾಗಲು ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಹದಿನಾಲ್ಕು ತಿಂಗಳ ಅಧಿಕಾರದ ಪುರಸಭೆಗೆ ಯಾಕೇ ಇಷ್ಟೊಂದು ಪ್ರತಿಷ್ಠೆ?

ಈ ಹಿಂದೆಯೆ  ಶಾಂತವೀರ ಬಿರಾದಾರ ಅಧ್ಯಕ್ಷರಾಗ ಬೇಕಿತ್ತು ಆದರೆ 2010-11ರ ಅವಧಿಯಲ್ಲಿ ಮಾಜಿ ಸಚಿವ  ದಿ. ಮಲ್ಲಪ್ಪ  ಮನಗೂಳಿ  ಅವರು ಅಂದು ಜಾಕೀರ್ ಮಕಾಂದಾರ  ಅವರನ್ನು  ಅಧ್ಯಕ್ಷ ಮಾಡಿದರು ಎಂಬುದಕ್ಕೆ  ಅಂದು ಬೇಜಾರಲ್ಲೆ ಸುಮ್ಮನಾಗಿದ್ದರು.  ಈ ಬಾರಿ ವೈದ್ಯೆ ಶಾಂತವೀರ ಮನಗೂಳಿ ಅವರು ಅಧ್ಯಕ್ಷರಾಗಿದ್ದಾಗ ಅವರ ವಿರೋಧಿ ಬಣದಲ್ಲಿದ್ದ ಹಣಮಂತ ಸುಣಗಾರ ಅವಿಶ್ವಾಸ ಗೋತ್ತುವಳಿ ಮಾಡಿದರು ಅಂದು ಶಾಂತವೀರ ಮನಗೂಳಿ ಪರವಾಗಿ  ನಾಲ್ಕು ಸದಸ್ಯರು ಮಾತ್ರ ನಿಂತಿದ್ದು ಅದರಲ್ಲಿ ಶಾಂತವೀರ ಬಿರಾದಾರ ಕೂಡಾ ಒಬ್ಬರು ಆದರಿಂದ ಈ ಭಾರಿ ಶತಾಯಗತಾಯ ಅಧ್ಯಕ್ಷರಾಗಲೆ ಬೇಕೆಂಬ ಪ್ರತಿಷ್ಠೆ ತೆಗೆದುಕೊಂಡಿದ್ದಾರೆ.

ಶಾಂತವೀರ ಮನಗೂಳಿ ಕಳೆದ ಬಾರಿ ಪ್ರತಿಷ್ಠೆಯಿಂದ ಅಧ್ಯಕ್ಷರಾಗಲು ಯಶಸ್ವಿಯಾಗಿದ್ದರು, ಆದರೆ ಹಲವಾರು ರಾಜಕೀಯ  ಬೆಳವಣಿಗೆ ಕಾರಣದಿಂದ ಅಭಿವೃದ್ಧಿ ಯಶಸ್ವಿಯಾಗಲು ಹಿನ್ನಡೆಯುಂಟಾಗಿರುವ ಕಳವಳ ಕಾಡುತ್ತಿರುವ ಹಾಗೆ ಗ್ರಾಸವಾಗುತ್ತಿದೆ.  ಹಾಗೂ ಪುರಸಭೆಗೆ ಅಧ್ಯಕ್ಷರಿಲ್ಲದಿರುವ ಅವಧಿಯಲ್ಲಿ ಕೆಲವರು  ತೆರೆಮರೆಯ ಮುತ್ತು ಹೊಳಪಿಸಿದಂತೆ ಆಡಳಿತ ಮಾಡಿದ್ದು  ಇಂದು ಶಾಂತವೀರ ಬಿರಾದಾರ  ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೆ, ಹಿನ್ನೆಲೆಯಲ್ಲಿ ಕುಳಿತು  ಆಟ ಆಡುವವರಿಗೆ ನೇರವಾಗಿ ಮುಖಭಂಗವಾಗುವ ಸಾಧ್ಯತೆ ಹೇಚ್ಚಾದರಿಂದ ಶಾಂತವೀರ ಮನಗೂಳಿ ಅವರಿಗೆ ಅಧ್ಯಕ್ಷ ಮಾಡಬೇಕೆಂದು  ಕೆಲವರು ಪ್ರತಿಷ್ಠೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಸವರಾಜ ಯರನಾಳ ಶಾಂತವೀರ ಬಿರಾದಾರ ಗುಂಪಲ್ಲಿ ಕಾಣಿಸಿಕೊಂಡಿರುವುದರ ಸುತ್ತ.

ಸದಸ್ಯ ಯರನಾಳ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಆಗಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಶಾಸಕರ ಆಪ್ತರಲ್ಲಿ ಪ್ರಮುಖರಾದ ಅವರು ಶಾಂತವೀರ ಬಿರಾದಾರ ಅವರೊಂದಿಗೆ ಹೋಗಿರುವುದರಿಂದ ಶಾಸಕರು ಪರೋಕ್ಷವಾಗಿ ಶಾಂತವೀರ ಬಿರಾದಾರ ಬೆಂಬಲಕ್ಕೆ  ನಿಂತಿದ್ದಾರಾ ಎಂಬದು ಗೊಂದಲಮಯವಾಗಿದೆ. ಇದುವರೆಗೂ ಶಾಂತವೀರ ಮನಗೂಳಿ ಅವರೊಂದಿಗೆ ಇದ  ಅವರ ಇಂದಿನ ನಡೆ ಬಗ್ಗೆ ಹಲವು ಅನುಮಾನಗಳು ಮೂಡುತ್ತಿದ್ದು  ಹಣಮಂತ ಸುಣಗಾರ ಅವರು ಕಣ್ಣದಲ್ಲಿ ಬಂದರೆ  ಅವರ ಬೆಂಬಲ ಯಾರಿಗೆ ಎಂಬುದು ಕಾದು ನೋಡಬೇಕಿದೆ.

ಶಾಸಕ ಅಶೋಕ ಮನಗೂಳಿ ಯಾರ ಪರ ?

ತಮ್ಮ ಮತ್ತು ಅಳಿಯನ ಮಧ್ಯೆ ಶಾಸಕರು ಯಾರ ಪರವಾಗಿ ನಿಲ್ಲುತ್ತಾರೆ ಎಂಬುದು ಇದೂವರೆಗೂ ನಿಗೂಡವಾಗಿದ್ದು  ಶಾಸಕರ ನಿರ್ಧಾರಕ್ಕಾಗಿ ಹಲವು ಸದಸ್ಯರು ಕಾಯುತ್ತಿದ್ದಾರೆ. ಯಾರೆ ಅಧ್ಯಕ್ಷರಾದರು ಶಾಸಕರು ಬೆಂಬಲ ಅನಿವಾರ್ಯ ವಾಗಿದೆ.  ಶಾಸಕರು ಯಾರ ಪರವಾಗಿ ನಿಂತರು ಗೊಂದಲ ಮಯವಾಗಲಿದೆ.

ಪುರಸಭೆ ಕುರ್ಚಿ ಕದನಕ್ಕೆ ನಾಳೆ ವಿರಾಮ ಬಿಳಲಿದೆ. ಯಾರೇ ಅಧ್ಯಕ್ಷರಾಗಲಿ ಸಿಂದಗಿ ನಗರ ಅಭಿವೃದ್ಧಿಗೆ ಶ್ರಮಿಸಲಿ, ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ  ನೀಡಲಿ ಎಂಬುದು ‌ಸಿಂದಗಿ ಜನರು ಆಶಾಭಾವನೆ ಆಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news