ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಅಂಗವಾಗಿ ರಾಜಯೋಗಿನಿ ಬ್ರಹ್ಮಕುಮಾರಿ ಪವಿತ್ರ ಅಕ್ಕನವರು ಸಾನಿಧ್ಯದಲ್ಲಿ ವರದಿಗಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಿಂದಗಿ: ಡಾ.ಬಿ.ಜಿ.ಪಾಟೀಲ ಅವರು ಪ್ರಾಸ್ಮಾತಾವಿಕವಾಗಿ ಮಾತನಾಡಿ ನೊಂದವರಿಗೆ ರಕ್ಷಣೆ ನೀಡುವಂತಾ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮತ್ತು ಭ್ರಷ್ಟ ಅಧಿಕಾರಿಗಳನ್ನ ಹಾಗೂ ರಾಜಕೀಯ ನಾಯಕರನ್ನು ಎಷ್ಟೇ ಪ್ರಭಾವಿಗಳ ಆಗಿರಲಿ ಅವರನ್ನು ಬಿಂಬಿಸುವ ಶಕ್ತಿ ಪತ್ರಿಕಾ, ಮಾದ್ಯಮ ರಂಗಕ್ಕೆ ಇದೆ ಅದಕ್ಕೆ ದೇಶದ ನಾಲ್ಕನೇ ಅಂಗವೆಂದು ಹೇಳಲಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉದಯವಾಣಿ ಪತ್ರಿಕೆಯ ವರದಿಗಾರರಾದ ರಮೇಶ ಪೂಜಾರಿ ಮಾತನಾಡಿ ನಮ್ಮಗೆ ಕರೆಸಿ ಸನ್ಮಾನಿಸಿದ್ದು ಎಂದು ನಾನು ಭಾವಿಸಲಾರೆ, ನಮ್ಮಗೆ ಆಶಿರ್ವಾದ ಮಾಡಲು ಕರೆಸಿದ ಭಾವನೆ ನನ್ನದು ಈಶ್ವರಿಯ ಸಂದೇಶ ಸಾರುವ ಈ ಪುಣ್ಯ ಸ್ಥಳದಿಂದ ಆಶಿರ್ವಾದ ಪಡೆದಿರುವುದು ನಮ್ಮ ಪುಣ್ಯ ಎಂದರು.
ಅಪರಾಧಕ್ಕೆ ಸವಾಲ್ ಪತ್ರಿಕೆಯ ಸಂಪಾದಕರಾದ ಟಿ.ಕೆ.ಮಲಗೊಂಡಭಾವೈಕ್ಯತೆಯ ತಾಣ ಈ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ. ಅಧ್ಯಾತ್ಮದಲ್ಲಿ ಒಲವು ಇದ್ದವರು ಈಗಿನ ಕಾಲದಲ್ಲಿ ಬಹು ಕಡಿಮೆ. ಇಂತಹ ಸಂದರ್ಭದಲ್ಲಿಯು ಆದ್ಯಾತ್ಮದ ಬಗ್ಗೆ ಪರಿಚಯಿಸುತ್ತಿರುವ ಎಲ್ಲ ಓಂ ಶಾಂತಿ ಬಳಗದ ಕಾರ್ಯ ಶ್ಲಾಘನೀಯ.
ಇಂದಿನ ಪರಿಸ್ಥಿತಿಯಲ್ಲಿ ಪತ್ರಿಕಾ ರಂಗದಿಂದ ಸುದ್ಧಿ ಹಾಕಿಸುವುದೊಂದೆ ಗೋತ್ತು ಆದರೆ ಹಾಕಿದ ಸುದ್ದಿಗೆ ಧನ್ಯವಾದ ಹೇಳುವ ಸೌಜನ್ಯವು ಈಗಿನ ಕಾಲದಲ್ಲಿ ಇಲ್ಲದಿರುವುದು ಬೇಸರ ತಂದರೆ ನಮ್ಮನ್ನು ಕರೆಸಿ ಸನ್ಮಾನಿಸುತ್ತಿರುವುದು ನಮ್ಮಗೆ ಅವಿಸ್ಮರಣೀಯ ಕ್ಷಣವಾಗಿದೆ.
ಯುವ ವರದಿಗಾರ ನಾಗೇಶ್ ತಳವಾರ ಮಾತನಾಡಿ ನಿಷ್ಠುರವಾಗಿ ಬರೆಯಿರಿ ಎಂದು ಹೇಳುತ್ತಾರೆ ನಾವು ನಿಷ್ಠುರವಾಗಿ ಬರೆದಾಗ ನಮ್ಮಗೆ ಒತ್ತಡ ಹಾಕುತ್ತಾರೆ. ಅದನ್ನು ಸ್ವಿಕರೀಸುವ ಮನೋಭಾವನೆಯು ಜನರು, ಮುಖಂಡರು, ರಾಜಕೀಯ ನಾಯಕರು ಬೆಳಸಿಕೋಳಬೇಕಾಗಿದೆ. ನಮ್ಮ ನಿಮ್ಮ ಸ್ನೇಹದ ಬಾಂಧವ್ಯದ ಸಂಭಂದವೆ ಬೇರೆ ಪತ್ರಿಕಾರಂಗದ ಕಾರ್ಯವೆ ಬೇರೆ ಆದರಿಂದ ಎರಡು ಒಂದೇ ತೂಕದಲ್ಲಿ ಅಳಿಯಬೇಡಿ ಎಂದರು
ಹಿರಿಯ ವರದಿಗಾರರಾದ ಜೋಗುರು ಟೈಂಸ್ ಸಂಪಾದಕ ಬೆನಕರಾಜ ಜೋಗುರ ಮಾತನಾಡಿ ನೀವು ನ್ಯಾಯದ ಪರವಾಗಿ ಬರೆದಾಗ ಮಾತ್ರ ನಿಮ್ಮಗೆ ಬೆದರಿಕೆ ಕೆರೆಗಳು ಬರುತ್ತವೆ. ನಿಮ್ಮ ಮೇಲೆ ದೂರುಗಳಾಗುತ್ತವೆ ಆದಾಗ ಮಾತ್ರ ನೀವು ಪರಿಪೂರ್ಣ ಪತ್ರಕರ್ತರಾಗುತ್ತಿರಿ ಎಂಬ ಪಿ.ಲಂಕೇಶ ಅವರು ಮಾತು ನಮ್ಮಲ್ಲಿ ಅಳವಡಿಸಕೋಳಬೇಕು. ಜವರ ತೊಂದರೆ, ಸಮಾಜಮುಖಿ ಕಾರ್ಯಗಳ ಬಗ್ಗೆ ಬರೆಯುವ ವರದಿಗಾರರು ತಾನ್ನಾಗಿಯೆ ಬೆಳೆಯುತ್ತಾರೆ. ಮರ್ಜಿ ಕಾಯುವ ಅಲರ್ಜಿ ಇದ್ದವರು ಪತ್ರಿಕಾರಂಗಕ್ಕೆ ಬರಬೇಡಿ. ಪತ್ರಿಕಾ ರಂಗಬಹಳ ಪವಿತ್ರವಾದದ್ದು ಎಂದು ಖಾರವಾಗಿ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಶಕ್ಷರಾದ ಆನಂದ ಶಾಬಾದಿ ಮಾತನಾಡಿ ನಮ್ಮ ದಿನನಿತ್ಯದ ಬದುಕು ಇನ್ನೋಬರು ದೂರದಿಂದಲೆ ನೋಡುತ್ತಿರುತ್ತಾರೆ ಅದನ್ನು ಮೇಲೆ ಕುಳಿತ ಭಗವಂತ ಅದನ್ನು ನೋಡಿ ನಮ್ಮ ಜೀವನದ ಪಾಪ- ಪುಣ್ಯಗಳ ಅಳೆಯುತ್ತಾನೆ ನಮ್ಮಗೆ ಇಂದು ಆಹ್ವಾನಿಸಿ ಸತ್ಕರಿಸಿದರಿಂದ ಮತ್ತಷ್ಟು ಉತ್ಸಾಹ ಹಾಗೂ ಜವಾಬ್ದಾರಿ ಹೇಚಿಸಿದೆ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಪವಿತ್ರ ಅಕ್ಕನವರು ಸಂಚಾಲಕರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಪೂಜ್ಯ ಮಾತೆಯರು ಆಶೀರ್ವಚನ ನೀಡುತ್ತಾ ನಮ್ಮ ಸುದ್ದಿಗಳನ್ನು ಎಲ್ಲೋ ಕುಳಿತು ಇದುವರೆಗು ಬಿತ್ತರಿಸುತ್ತಾ ಬಂದಿರುವುದು ಇಂದು ಪತ್ರಿಕಾ ದಿನಾಚರಣೆ ಅಂಗವಾಗಿ ನಿಮ್ಮನ್ನು ಭಗವಂತ ನಮ್ಮೊಂದಿಗೆ ಕೂಡಿಸಿದ್ದಾನೆ. ನಿಮ್ಮ ಕಾರ್ಯ ಪ್ರವೃತ್ತಿ ಯಾವುದೇ ಅಡೆ ತಡೆಗಳಾಗದೆ ಯಶಸ್ವಿಯಾಗಲೆಂದು ಆಶೀರ್ವಚನ ನೀಡಿದರು.
ತಾನಾಜಿ ಕನಸೆ, ವಿಜಯಕುಮಾರ ತೇಲಿ, ಶಿವನಗೌಡ ಬಿರಾದಾರ, ಶ್ರೀಶೈಲಗೌಡ ಮಾಗಣಗೇರಿ, ಸಂಗಣ್ಣ ಬಿರಾದಾರ, ಬಸವರಾಜ ಕಕ್ಕಳಮೇಲಿ, ರೇವಣಸಿದ್ದ ಪೂಜಾರಿ, ಮಲ್ಲಪ್ಪ ಡೋಣುರ, ಎಂ.ಎಂ.ದೊಡಮನಿ, ಮಲ್ಲಮ್ಮ ವಣಕ್ಯಾಳ, ಸುನಂದಾ ಕಕ್ಕಳಮೇಲಿ, ಮಾದೇವಿ ಪೂಜಾರಿ, ಮಂಜೂಳಾ ಹೂಗಾರ, ಸೀಮಾ ಉಡಚಾಣ, ಮಾದೇವಿ ಕರಲಗಿ, ಕಸ್ತೂರಿಬಾಯಿ ಬಿರಾದಾರ ಉಪಸ್ಥಿತರಿದ್ದರು ಶಿಕ್ಷಕರಾದ. ಎಸ್.ಬಿ.ಚೌದರಿ ಇವರು ಕಾರ್ಯಕ್ರಮ ನಿರೂಪಿಸಿದರು.



