Home News ಹಲವಾರು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ರಮೇಶ ಭೂಸನೂರ

ಹಲವಾರು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ರಮೇಶ ಭೂಸನೂರ

by vegadhut@gmail.com.
0 comments

ಸಿಂದಗಿ : ನಗರೋತ್ಥಾನ ಹಂತ -4 ರ ಯೋಜನೆಯ  ಪ್ಯಾಕೇಜ್ 1ರ 3ಕೋಟಿ 55 ಲಕ್ಷ 93 ಸಾವಿರ ರೂಗಳು,    2ನೇ ಪ್ಯಾಕೇಜ್ ನಲ್ಲಿ  2 ಕೋಟಿ 6 ಲಕ್ಷ 87 ಸಾವಿರ ರೂಗಳ  ಸಾಂಕೇತಿಕ  ಭೂಮಿಪೂಜೆಯನ್ನು ಆಶೀರ್ವಾದ ಕಲ್ಯಣ ಮಂಟಪದಿಂದ ಮುಲ್ಲಾ ಸರ್ ಮನೆವರೆಗೆ ಹಾಗೂ ಜ್ಯೋತಿ ನಗರದಲ್ಲಿ ಭೂಮಿಪೂಜೆ ಮಾಡಿದರು.

ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಅವರು ಮಾತನಾಡಿ ಸಿಂದಗಿ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಸಿಂದಗಿ ನಗರಕ್ಕೆ ಬಂದಿರುವ ಅನುದಾನ ಸಾಕಾಗುವುದಿಲ್ಲ ಮಾನ್ಯ ಶಾಸಕರು ಹೇಚ್ಚವರಿ ಅನುಧಾನ ತಂದು ಎಲ್ಲರೊ ಕ್ಷೇತ್ರದ ಏಳ್ಗೆಗಾಗಿ ಶ್ರಮಿಸೋಣಾ ಎಂದರು.

banner

ಭೂಮಿ ಪೂಜೆ ನೇರವೇರಿಸಿದ ಶಾಸಕ ಭೂಸನೂರ ಮಾತನಾಡಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಆಗುವ ಕಾಮಗಾರಿಗಳು ಅತ್ಯಂತ ಸುಂದರವಾಗಿ ಆಗಬೇಕು. ಇಗಾಗಲೇ ಗಾಂಧೀ ವೃತ್ತದಿಂದ ಟಿಪ್ಪು ವೃತ್ತದ ವರೆಗೆ ಮಾಡಿರುವ ಹಾಗೂ ಕನಕದಾಸ ವೃತ್ತದಿಂದ ಮೋರಟಗಿ ನಾಕಾ ವರೆಗೆ ಆಗಿರುವ ರಸ್ತೆ ಕಾಮಗಾರಿಗಳು ಅತ್ಯಂತ ಅಚ್ಚುಕಟ್ಟಾಗಿ  ನಡೆದಿವೆ, ಅದೇ ರೀತಿ ಕಾಮಗಾರಿಗಳು ಆಗಬೇಕು.

ನಗರೋತ್ಥಾನ ಯೋಜನೆ ಅಡಿಯಲ್ಲಿ ಇಗಾಗಲೇ ಮೂರು ಕೋಟಿ ಐವತ್ತು ಲಕ್ಷರೂ ಗಳ  ಹೇಚ್ಚುವರಿ ಅನುಧಾನ ತರಲಾಗಿದೆ. ಇನ್ನು ನಾಲ್ಕು ಕೋಟಿ ರೂಗಳ ಅನುಧಾನದ ಕ್ರೀಯಾಯೋಜನೆ ಸಿದ್ದಪಡಿಸಲಾಗಿದೆ ಅದನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ.

ಬಸ್ ತಂಗುದಾಣದ ಮುಂಬಾಗದಲ್ಲಿರುವ ರಸ್ತೆಯ ಜವಾಬ್ದಾರಿ ಸೈಪನ್ ನಾಟೀಕಾರ ಅವರಿಗೆ  ವಹಿಸಲಾಗಿದೆ ಆದಷ್ಟು ಬೇಗನೆ ಕೆಲಸ ನಿರ್ವಹಿಸಿ ಕೆಲಸ ಯಾರೇ ಮಾಡಲಿ ಸುಂದರವಾಗಿ ಜನರ ಉಪಯೋಗಕ್ಕೆ  ಬರಬೇಕು ಅಭಿವೃದ್ಧಿಗೆ ಮನ್ನಣೆ ದೊರಕಿಸಿಕೋಡಬೇಕು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಕಾರ್ಯನಿರ್ವಾಹಕ ಅಭಿಯಂತರರಾದ ನಿಂಗರಾಜ ಗುಡಿಮನಿ, ಅಜ್ಜರ ನಾಟೀಕಾರ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಬಿಜೆಪಿ ಮುಖಂಡ ಶ್ರೀಶೈಲಗೌಡ ಮಾಗಣಗೇರಿ, ಹಿರಿಯರಾದ ಶರಣಪ್ಪ ಕುರಡೆ, ಹಾಗೂ ಪುರಸಭೆ ಸದಸ್ಯರು ಹಲವು ವಾರ್ಡ ಜನರು ಉಪಸ್ಥಿತರಿದ್ದರು.

ವೀಡಿಯೋ ವೀಕ್ಷಣೆಗಾಗಿ : https://fb.watch/gfgC35ttRG/

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news