
ಸಿಂದಗಿ: ಸಿಂದಗಿ ತಾಲೂಕಿನ ರಾಂಪುರ ಪಂಚಾಯತ ಯಲ್ಲಿ ಹಗರಣಗಳ ಕುರಿತು ಕರ್ನಾಟಕ ರಣದೀರ ಪಡೆಯ ಉತ್ತರ ಕರ್ನಾಟಕದ ಅಧ್ಯಕ್ಷರಾದ ಸಂತೋಷ ಮಣಗಿರಿ ಪತ್ರಿಕಾಗೋಷ್ಠಿ ನಡೆಸಿದರು.
ಸಂಪೂರ್ಣ ವೀಡಿಯೋಗಾಗಿ ಲಿಂಕ್ : https://fb.watch/fSE_L8mnKH/
ಸಿಂದಗಿ ತಾಲೂಕಿನ ರಾಂಪುರ ಪಂಚಾಯತ ವ್ಯಾಪ್ತಿಯಲ್ಲಿ ರೈತರಿಗೆ ಸಿಗಬೇಕಾದ ಯೋಜನೆಗಳು ನುಂಗಿ ಹಾಕಿರುವುದು ಅಲ್ಲಿನ ರೈತರಿಗೆ ಮಾಡಿದ ಮೋಸವಾಗಿದೆ. ರೈತರ ಬದು ನಿರ್ಮಾಣ, ಎರೆಹೋಳು ತೋಟ್ಟಿ, ದನದ ಶೇಡ್ಡು, ಕುರಿ ಶೇಡು, ಕೃಷಿಹೊಂಡ ಕಾಮಗಾರಿಗಳು ಮಾಡಲಾಗಿದೆ ಎಂದು ಲಕ್ಷಾಂತರ ಹಣ ನುಂಗಿ ಹಾಕಿದ್ದಾರೆ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬಾ ರಾಠೋಡ, ಪಿ.ಡಿ.ಓ ಸಂಗಮೇಶ, ಜಾನಮಟ್ಟಿ, ಹಾಗೂ ಜೆ.ಇ ಅಧಿಕಾರಿಗಳಿಗೆ ಪರ್ಸೆಂಟೆಜ್ ಹೋಗಿದೆ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದು ಈ ಹಗರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಅಧಿಕಾರಿಗಳಿಗೆ ಪರಿಶೀಲನೆ ಮಾಡುವಂತೆ ಮನವಿ ಮಾಡಿಕೊಂಡರು ಬಿಲ್ಲ್ ಪಾಸ್ ಮಾಡಿ ಜಿಲ್ಲಾ ಅಧಿಕಾರಿಗಳಿಗೆ ಕಳುಹಿಸಿದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಹದಿನೈದನೆ ಹಣಕಾಸಿನಡಿ ಜಮೆ ಆದ ಎಂಟು ಲಕ್ಷ ರೂಗಳು ಜಮೆ ಆದ ದಿನವೇ ಖರ್ಚು ಹಾಕಲಾಗಿದೆ ಪಂಚಾಯತಗೆ ಬಿಡುಗಡೆಯಾದ ಹಣ ಒಂದೆ ತಾಸಿನಲ್ಲಿ ಖರ್ಚು ಬಿಳುತ್ತದೆ ಮತ್ತು ಒಂದೆ ಅಂಗಡಿಯ ಹೆಸರಿಗೆ ಖರ್ಚು ಬಿದ್ದಿದೆ ಇದರ ಸಂಪೂರ್ಣ ತನಿಖೆ ಮಾಡಬೇಕಾದ ಅಧಿಕಾರಿಗಳು ಭ್ರಷ್ಟರ ಬೇನ್ನಿಗೆ ನಿಂತಿದ್ದಾರೆ.
ಆಡಳಿತ ಅಧಿಕಾರಿಯ ವೈಪಲ್ಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಂಪುರ ಪಂಚಾಯತನ ಆಡಳಿತ ಅಧಿಕಾರಿಯಾಗಿಯು ಕಾರ್ಯನಿರ್ವಹಿಸುತ್ತಿದ್ದು ಬಸವರಾಜ ಸಿ. ಜಿಗಳೂರು ಇವರ ನೇತೃತ್ವದಲ್ಲಿ 30 ಜೂನ್ 2022 ರಂದು ಗ್ರಾಮ ಸಭೆ ಕರೆಯಲಾಗಿತ್ತು, ಸಭೆಗೆ ಗೈರಾಗಿದ್ದರು. ಕಾನೂನಿನ್ವಯ ಅಂದು ನಡೆಸಬೇಕಾದ ಸಭೆ ರದ್ದು ಮಾಡದೆ ಸಭೆ ಜರುಗಿಸಿದ್ದಾರೆ. ಗೈರಾದ ಆಡಳಿತ ಅಧಿಕಾರಿಯು ಸಭೆಗೆ ಹಾಜರಾಗಿರುವಂತೆ ಸಹಿ ಮಾಡಿದ್ದಾರೆ, ಅವರು ಗ್ರಾಮ ಸಭೆಗೆ ಹಾಜರಾಗದೆ ಇರುವ ವೀಡಿಯೋ ಚಿತ್ರಿಕರಣದ ಸಿ.ಡಿ. ಯು ಇದೆ ಎಂದು ಆರೋಪಿಸಿದ್ದರು. ಗ್ರಾಮಸಭೆ ಯಲ್ಲಿ ನಿರ್ಧಾರ ತೆಗೆದುಕೊಂಡಿರುವಂತೆ ಠರಾವು ಹೊರಡಿಸಿ 50 ಅಂಬೇಡ್ಕರ ಹಾಗೂ ಬಸವ ವಸತಿ ಯೋಜನೆಯ ಮನೆಗಳು ಹಂಚಿಕೆ ಮಾಡಲಾಗಿದೆ. ತದ ನಂತರ ಹೇಚ್ಚುವರಿಯಾಗಿ 150 ಮನೆಗಳು ಮಂಜೂರಾಗಿದ್ದು ಅದೇ ಗ್ರಾಮ ಸಭೆಯ ಠರಾವು ಹಚ್ಚಿ ಹಂಚಿಕೆ ಮಾಡಲಾಗಿದೆ ಎಂದು ಆಡಳಿತ ವರ್ಗದ ಮೇಲೆ ಹರಿಹಾಯ್ದರು. ರಾಂಪುರ ಪಂಚಾಯತ ಸದಸ್ಯರ ಪ್ರತಿನಿಧಿ ಕರಪ ಮುಖಂಡ ದಸ್ತಗೀರ ನದಾಪ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

