ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡದೆ ಇರುವುದರಿಂದ ಹಲವಾರು ತೊಂದರೆಗಳಾಗುತ್ತಿವೆ. ಯಂಕಂಚಿ ಗ್ರಾಮದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ನಿಮ್ಮ ಅರಿವಿಗೆ ಇದೆಯೇ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಂಭುಲಿಂಗ ಹಿರೇಮಠ ಅವರಿಗೆ ಶಾಸಕ ಅಶೋಕ ಮನಗೂಳಿ ತರಾಟೆಗೆ ತೆಗೆದುಕೊಂಡರು.
ಸಿಂದಗಿ : ತಾಲೂಕಾ ಪಂಚಾಯತ ನಲ್ಲಿ ನಡೆದ ಕೆ.ಡಿ.ಪಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಬಾಲ್ಯ ವಿವಾಹ ತಡೆಗಟ್ಟುವುದು ಸರಕಾರದ ಮಹತ್ತರ ನಿರ್ಣಯವಾಗಿದೆ. ಅಧಿಕಾರಿಗಳಾದ ನೀವು ಮಾಡದೆ ಇದ್ದರೆ ಹೇಗೆ ಇಂದು ಮದುವೆ ನಿಂತ ಹೋದ ಕಾರಣಕ್ಕೆ ಒಂದು ಜೀವವೆ ಹೋಗಿದೆ ಸೌಜನ್ಯಕ್ಕೆ ಅವರ ಮನೆಗೆ ಹೋಗಿ ಸಾಂತ್ವಾನ ಹೇಳಿ ಬಂದಿಲ್ಲ. ಎನ್ನಾದರು ಹೇಳಿದರೆ ನಿಮ್ಮ ಅಂಗನವಾಡಿ ಕಾರ್ಯಕರ್ತರ ಮೇಲೆ ಹಾಕುವುದು ಸರಿಯಾದುದ್ದಲ್ಲ ಬಾಲ್ಯ ವಿವಾಹದ ಕುರಿತು ಕಾರ್ಯಕ್ರಮ ಮಾಡಿ. ಇಂತಹ ಘಟನೆ ಕಂಡು ಬಂದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಜೆಜೆಎಮ್ ಕುರಿತು ವರದಿ ನೀಡಲು ಥಾರಾನಾಥ ಬರುತ್ತಿದಂತೆ ಕಳೆದ ಬಾರಿ ಒಂದು ಗಂಟೆಗಳ ಕಾಲ ವಿವರವಾದ ಚರ್ಚೆ ನಡೆದರು ಯಾವುದೇ ಸುಧಾರಣೆ ಇಲ್ಲ ನಿಮ್ಮ ವರದಿಗಳು ನೋಡಿದರೆ ಇದು ಗೌಟಿ (ಆಡುಭಾಷೆಯಲ್ಲಿ ) ಎಂದೇನ್ನಿಸುತ್ತಿದೆ. ನೀವು ಮತ್ತು ನಿಮ್ಮ ಸಿಬ್ಬಂದಿ ಕುಂಬಾರ ಸರಕಾರದಿಂದ ಬಂದಿರುವ ಯಾವ ಯೋಜನೆಗಳು ನೀವು ಅನುಷ್ಟಾನ ತಂದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೋಳಿ. ಸಿಂದಗಿ ಮತಕ್ಷೇತ್ರದಲ್ಲಿ ಜೆಜೆಎಮ್ ಕಾಮಗಾರಿಗಳು ಕಳಪೆ ಯಾಗಿವೆ. ಜನರು ಕಾಮಗಾರಿ ಕುರಿತು ಸಂತೋಷವಾಗಿಲ್ಲ. ಇಂದೇ ಹೊರಗಡೆಯು ಕುರಿಮನಿ ಎಂಬುವವರು ದೂರು ನೀಡಿದ್ದಾರೆ ಎಂದಾಗ ಅಧಿಕಾರಿ ಥಾರಾನಾಥ ಅವರು ದಿನಾಲು ಕೋಡುತ್ತಾರೆ ಪ್ರಧಾನ ಮಂತ್ರಿಗಳಿಗು ಪತ್ರ ಬರೆದಿದ್ದಾರೆ ಎಂದು ಶಾಸಕರು ಹಾಗೂ ತಾಲೂಕಾ ಅಧಿಕಾರಿಗಳ ಮುಂದೇ ಹೇಳುವುದು ನೋಡಿದರೆ ಅವರ ನಿಷ್ಕಾಳಜಿ ಎತ್ತಿ ತೋರಿಸುವಂತ್ತಿತ್ತು.

ಬ್ಯಾಕೋಡ ಪಂಚಾಯತ ಅಧ್ಯಕ್ಷರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕರು ಜೆಜೆಎಮ್ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಲ್ಲಿ ಎರಡು ತಿಂಗಳಾಯಿತ್ತು ಆದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಪಂಚಾಯತ ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿದರು.
ಲೊಕೋಪಯೋಗಿ ಇಲಾಖೆಯ ಅರುಣಕುಮಾರ ವಡಗೇರಿ ವರದಿ ಸಲ್ಲಿಸುತ್ತಾ ಪಟ್ಟಣದ ಬಸ್ಸ್ ನಿಲ್ದಾಣದ ಮುಂಬಾಗದ ಕಾಮಗಾರಿ ಕುರಿತು ಗುತ್ತಿಗೇದಾರ ಎಂ.ಬಿ ಬೀಳಗಿ ಮಾಡಲು ಬಂದಿದ್ದಾನೆ. ಆದರೆ ಎರಡು ದಿನದ ಹಿಂದೆ ಎಂ ಆರ್ ಟಿ ಅವರ ಮಗ ನದೀಮ್ ಪೋನ್ ಮಾಡಿ ಗುತ್ತಿಗೇದಾರನಿಗೆ ಯಾಕೇ ಕಿರುಕುಳ ನೀಡುತ್ತಿದ್ದಿರಿ ಅವನ್ನು ಆಕ್ಷಿಜನ್ ಮೇಲೆ ಬದುಕುತ್ತಿದ್ದಾನೆ, ನಾವು ಕೆಲಸ ಮಾಡುವುದಿಲ್ಲ ಯಾರಿಗೆ ಬೇಕಾದರು ಹೇಳಿ ಎಂದು ಹೇಳುತ್ತಿದ್ದಾನೆ ಎರಡು ಬಾರಿ ನಾನು ಮಾತನಾಡಿದರು ಹೀಗೆ ಮಾತಾನುಡುತ್ತಿದ್ದಾನೆ ಎಂದು ಶಾಸಕರ ಮುಂದೆ ಸಮಸ್ಯೆ ಕುರಿತು ಅಳಲು ಹೇಳಿಕೊಂಡರು.
ಕೃಷಿ ಇಲಾಖೆಯ ಹೆಚ್.ವಾಯ್.ಸಿಂಗೇಗೋಳ, ಕ್ಷೇತ್ರ ಶೀಕ್ಷಣಾಧಿಕಾರಿ ಮಾಂತೇಶ ಯಡ್ರಾಮಿ, ಪ್ರಗತಿ ಪರಿಶೀಲನಾ ವರದಿ ಹೇಳಿದರು. ತಾಲೂಕಾ ಪಂಚಾಯತ ಆಡಳಿತ ಅಧಿಕಾರಿ ನಿಂಗಪ್ಪ ಗೋಠೆ, ತಾಲೂಕಾ ದಂಡಾಧಿಕಾರಿ ಪ್ರದೀಪ ಕುಮಾರ ಹಿರೇಮಠ, ಇ.ಓ ರಾಮು ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ ಹಾಗೂ ಶೀವು ಕೋಟಾರಗಸ್ತಿ ಇದ್ದರು.
VIDEO LINK :
ಸಿಂದಗಿ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆಯ ವಿವರ
https://youtu.be/ExZTBvBIh0I?si=weVwWCLLW_mSH7gB
ಸಿಂದಗಿ ಕೆ.ಡಿ.ಪಿ ಸಭೆಯಲ್ಲಿ ಹಲವು ನಿರ್ಣಯಗಳ ಅಂಗೀಕಾರಕ್ಕೆ ಶಾಸಕ ಅಶೋಕ ಮನಗೂಳಿ ಮನವಿ.
https://youtu.be/HVK5wjlUdCE?si=B7APALyjFEPHNwMM
