Home News ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ರಕ್ತಧಾನ ಶಿಬಿರ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ರಕ್ತಧಾನ ಶಿಬಿರ

by vegadhut@gmail.com.
0 comments

ಸಿಂದಗಿ: ಪ್ರಧಾನಿ ನರೇಂದ್ರ ಮೋದಿಯವರ  72 ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಭೂಸನೂರ ಇಂದು ಬಾಜಪ ಪಕ್ಷದ ಕಾರ್ಯಕರ್ತರ ಯುವ ಬಳಗವು ಬಸವೇಶ್ವರ ವೃತ್ತದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದು ದೇಶ ಸೇವೆ ಮಾಡುತ್ತಿರುವ ನಾಯಕರಿಗೆ ಗೌರವ ಸಲ್ಲಿಸಿದ್ದಾರೆ ಮತ್ತು ರೋಗಿಗಳಿಗೆ ಹಣ್ಣ-ಹಂಪಲು ಹಂಚಿ ಮಾದರಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ ಎಂದು ಹೇಳಿದರು.

banner

ಕರ್ತವ್ಯದಲು ಮಾನವಿಯತೆ ತೋರಿದ ಪೊಲೀಸ್ ಸಿಬ್ಬಂದಿಗಳು 

ಸಿಂದಗಿ ಠಾಣೆಯ ಸಿಬ್ಬಂದಿಗಳಾದ ಸಿದ್ದನಗೌಡ ದೊಡಮನಿ,  ಶರಣಗೌಡಾ ಬಿರಾದಾರ, ಗೋಲ್ಲಳಪ್ಪಇಜೇರಿ , ಮೈಬೂಬ ಮುಲ್ಲಾ ಅವರನ್ನು ರಕ್ತಧಾನ  ಶಿಬಿರದ  ಭದ್ರತೆಗಾಗಿ  ನಿಯೋಜಿಸಲಾಗಿತ್ತು, ಸ್ವಯಂ ಪ್ರೇರಿತವಾಗಿ  ರಕ್ತ ಧಾನಮಾಡಿ  ಯುವಕರಿಗೆ ಸ್ಪೂರ್ತಿಯಾದರು.  ಧಾನಮಾಡಿ ಮಾತನಾಡಿದ ಸಿದ್ದನಗೌಡ ದೊಡಮನಿ  ಯಾವುದೊ ಒಂದು ಜೀವಕ್ಕೆ ಆಸರೆ ಆಗಬೇಕೆಂದು ಇಂದು ರಕ್ತಧಾನ ಮಾಡಿದ್ದೆನೆ ಹಿಂದೆಯು ಹಲವಾರು ಬಾರಿ  ರಕ್ತ  ನೀಡಿದ್ದೆನೆ ಕೆಲವು ತಿಂಗಳುಗಳಿಂದ ನೀಡಿರಲಿಲ್ಲಾ ಅದಕ್ಕೆ ನೀಡಿದ್ದೆನೆ ಯುವಕರು ರಕ್ತ ನೀಡುವ ಹವ್ಯಾಸ ಬೆಳೆಸಿಕೋಳ್ಳಬೇಕು ಇಂದು ಸಿಬ್ಬಂದಿಯವರೊಂದಿಗೆ ರಕ್ತಧಾನ ಮಾಡಿರುವುದು ಸಂತಸ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಿಜೆಪಿ ಮುಖಂಡರಾದ ಎಮ್.ಎಸ್.ಮಠ, ಅಶೋಕ ಅಲ್ಲಾಪೂರ, ಸಿದ್ದನಗೌಡ ಪಾಟೀಲ, ಚಂದ್ರಶೇಖರ ನಾಗೂರ, ಬಿ.ಹೆಚ್.ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಶಂಕರ ಬಗಲಿ, ರಾಜಶೇಖರ ಪೂಜಾರಿ, ಶಿವಕುಮಾರ ಬಿರಾದಾರ, ಗುರು ತಳವಾರ, ಶ್ರೀಶೈಲ ಕಲಬುರ್ಗಿ, ಅರವಿಂದ ಹಡಗಲಿ, ಅಶೋಕ ನಾರಾಯಣಪೂರ, ಭರತ, ಅಭಿಷೇಕ ಕಲಶೆಟ್ಟಿ, ಶ್ರೀಧರ ಮಲ್ಲೇದ, ಶ್ರೀಧರ ಬೋರಗಿ, ಶಿವು ಪ್ಯಾಟಿ, ಶ್ರೀಕಾಂತ ಪಾಟೀಲ, ಸಿದ್ದನಗೌಡ, ದೇವು, ಮನೋಜ ಪಾಟೀಲ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news