Home News ಮೆರವಣಿಗೆ ಇಲ್ಲದ ಗಣಪ್ಪ ಸ್ವಾತಂತ್ರ್ಯ ನೆನಪಿಸಿದ

ಮೆರವಣಿಗೆ ಇಲ್ಲದ ಗಣಪ್ಪ ಸ್ವಾತಂತ್ರ್ಯ ನೆನಪಿಸಿದ

by vegadhut@gmail.com.
0 comments

ಭಾವ್ಯಕ್ಯತೆಗೆ ಸಾಕ್ಷಿಯಾದ ಗಜಾನನಿಗೆ ಅಧ್ಯಕ್ಷ ಉಪಾಧ್ಯಕ್ಷ ಕಮೀಟಿ ಅಥವಾ ಮಂಡಳಿ ಯಾವುದು ಇಲ್ಲ  ಆದರು ಗಣೇಶನ ಸಂಭ್ರಮ ಕಾಲೋನಿ ತುಂಬಾ ಹಬ್ಬದ ವಾತಾವರಣ ನಿರ್ಮಾಣಮಾಡಿದೆ.

ಸಿಂದಗಿ : ಪಟ್ಟಣದ ಕಲ್ಯಾಣ ನಗರದ ಪ್ರೊಪೇಸರ್ ಕಾಲೋನಿಯಲ್ಲಿ ಸಣ್ಣ ಸಣ್ಣ ಮಕ್ಕಳು ಪ್ರತಿಷ್ಠಾಪಿಸಿದ  ಗಜಾನನ  ಇಂದು ಮನೆ ಮನೆ ಮಾತ್ತಾಗಿದೆ. ಸಣ್ಣದೊಂದು ಪತ್ರಾಸ್ ಶೆಡ್ಡು ಹಾಕಿ ಅದರಲ್ಲೊಂದು ಪುಟ್ಟ ಗಣಪನಿಟ್ಟು ಮಕ್ಕಳು ಆರಂಬಿಸಿದ ಗಣಪ ಇಂದು ಕಾಲೋನಿ ಪೂರ್ಣ ಹಬ್ಬವಾಗಿ ಆಚರಿಸುವಂತಾಗಿದೆ. 

ನಿಜವಾಗಿ ನೋಡುವುದಾದರೆ ಸಾಯಂಕಾಲ 6ಗಂಟೆಯಾದರೆ ಸಂಪೂರ್ಣ ಕಾಲೋನಿ ಸ್ಥಬ್ಧವಾಗಿ ಕಂಡುಬರುವುದು ಸಹಜ. ಊಟದ ನಂತರ ಕೆಲ ಸಮಯ ಹಾಗೆ ವಾಯುವಿಹಾರಕ್ಕೆ ಬಂದರೆ ಯಾರು ರಾತ್ರಿ 8ರ ನಂತರ ಹೊರಗೆ  ಸಿಗುವುದು ಕಷ್ಟ. ಇಂದು ಸಂಪೂರ್ಣ ಕಾಲೋನಿಯ ಜನರು ಗಣಪನಿಗೆ ದಿನನಿತ್ಯ ಒಬ್ಬರಂತೆ ಪ್ರಸಾದದ ವ್ಯವಸ್ಥೆ  ಮಾಡಿ ಎಲ್ಲರು ಸೇರಿ ಮಾತನಾಡುತ್ತಾ ಕುಳಿತಿರುವುದು ಕಂಡರೆ ಅಂದು ಸ್ವಾತಂತ್ರಕ್ಕಾಗಿ ಒಗ್ಗೂಡಿಸಲು ಆರಂಭಿಸಿದ  ಬಾಲಗಂಗಾಧರ ತಿಲಕರ ಕಥೆ ನೆನಪಾಗದೆ ಇರದು. 

ಗಜಾನನ ಸಂಭ್ರಮದಲ್ಲಿ ಪಾಲ್ಗೊಂಡ ಸ್ಥಳಿಯರು ಮಕ್ಕಳು ಕುಂದಿರಿಸಿದ ಗಣಪತಿ ಮೆರವಣಿಗೆ ಮಾಡುವುದಿಲ್ಲ. ದುಂದು ವೆಚ್ಚಮಾಡದೆ  ಪೂಜೆ ಮಾಡಿ ಸರಳವಾಗಿ ಗಣಪನಿಗೆ ಬಿಳ್ಕೋಡಲಾಗುವುದು ಮತ್ತು ದಿನನಿತ್ಯ ಒಬ್ಬರು ಸ್ವ ಇಚ್ಛೆಯಿಂದ ಪ್ರಸಾದ ಮಾಡಿಸುತ್ತಿದ್ದಾರೆ ಮನೆಮನೆಗೂ ಸಂಭ್ರಮ ಪಡುತ್ತಿರುವುದು ಸಂತಸ ತಂದಿದೆ ಎಂದರು. 

banner

ಶುದ್ಧ ಮನಸ್ಸಿನಿಂದ ಸಣ್ಣ ಸಣ್ಣ ಮಕ್ಕಳು ಸಣ್ಣ ಗಣಪನ ಪ್ರತಿಷ್ಠಾನ ಮಾಡಿ ದಿನನಿತ್ಯ ಪೂಜೆ ಶುಧ್ಧ ಭಾವ ಮತ್ತು ಶುಧ್ಧ ಭಕ್ತಿಯಿಂದ ಮಾಡುತ್ತಿರುವುದು ಸಂತಸ ತಂದಿದೆ. – ಶೈಲಶ್ರೀ ನ್ಯಾಮಣ್ಣವರ ಸ್ಥಳಿಯ ಭಕ್ತಾದಿ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news