ಮಾವಂದಿರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದಂತೆ ಶಾಂತವೀರ ಬಿರಾದಾರ ಕಾಣುತ್ತಿದ್ದು ಅವಿರೋಧ ಆಯ್ಕೆ ಆಗುವುದು ನಿಶ್ಚಿತ!
ಸಿಂದಗಿ : ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಲಿದ್ದು ತಡರಾತ್ರಿ ವರೆಗೆ ಊರಿನ ಹೊರವಲಯದ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ತೋಟದ ಮನೆಯೊಂದರಲ್ಲಿ ಪುರಸಭೆ ಸದಸ್ಯರೊಂದಿಗೆ ಚರ್ಚಿಸಿದ ಶಾಸಕ ಅಶೋಕ ಮನಗೂಳಿ ಸಹೋದರ ಮಾಜಿ ಉಪಾಧ್ಯಕ್ಷ ಶಾಂತವೀರ ಮನಗೂಳಿ ಸೇರಿದಂತೆ ಬೆಂಬಲಿತ ಸದಸ್ಯರೊಂದಿಗೆ ಚರ್ಚಿಸಿ ಅಳಿಯನ ಅವಿರೋಧ ಆಯ್ಕೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
https://vegaduta.suddisappala.com/%e0%b2%b6%e0%b2%be%e0%b2%82%e0%b2%a4%e0%b2%b5%e0%b3%80%e0%b2%b0%e0%b2%b0-%e0%b2%ae%e0%b2%a6%e0%b3%8d%e0%b2%af%e0%b3%86-%e0%b2%9a%e0%b3%81%e0%b2%b0%e0%b3%81%e0%b2%95%e0%b3%81%e0%b2%97%e0%b3%8a%e0%b2%82/?noamp=mobile#respon
ತೆರೆಮೆರೆಯ ಹಿಂದಿನ ಕಸರತ್ತು ಸಫಲ – ವಿಫಲ
ಶಾಸಕ ಅಶೋಕ ಮನಗೂಳಿ ಆಪ್ತರಾದ ಬಸವರಾಜ ಯರನಾಳ ಹಾಗೂ ಪಾರ್ವತಿ ದುರ್ಗಿ ದಿಢೀರ್ ಬೆಳವಣಿಗೆಯಿಂದ ಶಾಂತವೀರ ಬಿರಾದಾರ ಬಣದೊಂದಿಗೆ ಗುರುತಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಹಾಗೂ ಶಾಂತವೀರ ಬಿರಾದಾರ ಅವರನ್ನು ಸಂಧಾನಕ್ಕು ಮುನ್ನವೆ ನಂಬರ್ ಗೇಮ್ ನಲ್ಲಿ ಬಹುಮತಕ್ಕೆ ಬಲಿಷ್ಠ ಮಾಡಲಾಗಿದೆ ಎಂಬುದು ಸದಸ್ಯರ ಮದ್ಯದ ಗುಸು-ಗುಸು ಚರ್ಚೆಗಳು ನಡೆದಿವೆ. ಶಾಂತವೀರ ಬಿರಾದಾರ ಅಧ್ಯಕ್ಷರಾಗಲು ಶ್ರಮಿಸಿದ ತಂಡ ಗೆಲುವಿನ ಮಾಲೆ ಧರಿಸಿ ಸಂಭ್ರಮಿಸಲು ಸಫಲವಾದಂತೆ ಕಾಣುತ್ತಿದೆ.
ಇತ್ತ ಶಾಂತವೀರ ಮನಗೂಳಿ ಬೆಂಬಲಿತ ಸದಸ್ಯರು ಕಳೆದ ಬಾರಿ ಅವರ ವಿರುದ್ಧವೆ ಅವಿಶ್ವಾಸ ನಿರ್ಣಯಕ್ಕೆ ಹರಸಾಹಸ ಪಟ್ಟಿದ್ದರು. ಈ ಬಾರಿ ಬೇಷರತ್ತಾಗಿ ಶಾಂತವೀರ ಮನಗೂಳಿ ಅವರಿಗೆ ಪಟ್ಟ ಕಟ್ಟಲು ಮುಂದಾಗಿದ್ದು ಅಳಿಯ-ಮಾವನ ಮಧ್ಯೆ ಕುರ್ಚಿ ಕದನಕ್ಕೆ ಕಾರಣವಾಗಿತ್ತು. ಹಿಂದೆ ಅವಿಶ್ವಾಸಕ್ಕೆ ಮುಂದಾಗಿದ್ದ ತಂಡದಲ್ಲಿನ ಕೆಲ ಸದಸ್ಯರ ರಾಜಕೀಯ ಲೇಕಾಚಾರ ಉಲ್ಟಾ ಹೋಡೆದಿದ್ದು ಅವಿರೋಧವಾಗಿ ಆಯ್ಕೆಯ ನಿರ್ಧಾರ ಕೆಲ ಸದಸ್ಯರಿಗೆ ಮುಖಭಂಗ ವಾಗುವುದು ಖಚಿತವಾದಂತಿದೆ. ಮತ್ತು ಶಾಂತವೀರ ಬಿರಾದಾರ ಅಧ್ಯಕ್ಷ ಮಾಡಬಾರದೆಂಬ ತೆರೆ ಮರೆಯ ಕೆಲವರ ಸತತ ಪ್ರಯತ್ನ ವಿಫಲವಾಗಿದೆ.
ಗೊಂದಲದಲ್ಲಿ ಉಪಾಧ್ಯಕ್ಷ ಸ್ಥಾನ
ಬಹುತೇಕ ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಖಚಿತ ವಾಗುತ್ತಿದ್ದಂತೆ ಉಪಾಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ಪ್ರಾರಂಭವಾಗಿದೆ. ಶಾಂತವೀರ ಮನಗೂಳಿ ಆಪ್ತ ಶ್ರೀಶೈಲ ಭೀರಗೊಂಡ ಬೇಡಿಕೆ ಪ್ರಾರಂಭದಿಂದಲೂ ಇಟ್ಟಿದ್ದಾರೆ. ಮಾಜಿ ಅಧ್ಯಕ್ಷರ ಬ್ಯಾಟಿಂಗ್ ಶ್ರೀಶೈಲ ಪರ ಇದ್ದರು ಅಚ್ಚರಿ ಪಡುವಂತಿಲ್ಲ.
ಹಿರಿಯ ಸದಸ್ಯ ರಾಜಣ್ಣ ನಾರಾಯಣಕರ ಈ ಬಾರಿ ಮಾಜಿ ಅಧ್ಯಕ್ಷ ಶಾಂತವೀರ ಮನಗೂಳಿ ಪರವಾಗಿ ಬ್ಯಾಟಿಂಗ್ ಮಾಡಿರುವುದು ಹಾಗೂ ಮಾಜಿ ಸಚಿವ ದಿವಂಗತ ಮಲ್ಲಪ್ಪ ಮನಗೂಳಿ ಇವರೊಂದಿಗೆ ಒಡನಾಡಿಯಾಗಿದ್ದರು ಅವರು ಹಿರಿತನವೇ ಅವರ ಉಪಾಧ್ಯಕ್ಷಗಾಧಿಗೆ ಶಕ್ತಿ.
ಯುವ ಸದಸ್ಯ ಸಂದೀಪ ಚೌರ ಶಾಸಕ ಅಶೋಕ ಮನಗೂಳಿ ಅವರ ಆಪ್ತರಲ್ಲೋಬರಾಗಿ ಗುರುತಿಸಿಕೊಂಡಿದ್ದಾರೆ ಶಾಸಕರ ನಿರ್ಣಯಕ್ಕೆ ಬದ್ಧ. ಹಾಗೂ ಕಳೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಿಂತು ಮುಖಭಂಗ ಎದುರಿಸಿದ್ದರು.
ಒಟ್ಟಾರೆಯಾಗಿ ಪುರಸಭೆ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಆಗುವುದು ನಿಶ್ಚಿತವಾದಂತಿದೆ ಹಾಗೂ ಉಪಾಧ್ಯಕ್ಷ ಯಾರಾಗುತ್ತಾರೆ ಕಾದು ನೋಡಬೇಕಾಗಿದೆ.
