Home News ಅಭಿವೃದ್ಧಿಗೆ ಸಹಕಾರ ನೀಡಿದ ಬೀದಿ ಬದಿಯ ವ್ಯಾಪಾರಿಗಳು

ಅಭಿವೃದ್ಧಿಗೆ ಸಹಕಾರ ನೀಡಿದ ಬೀದಿ ಬದಿಯ ವ್ಯಾಪಾರಿಗಳು

by vegadhut@gmail.com.
0 comments

 

ಸಿಂದಗಿ : ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶಹಾಪುರ ಪೆಟ್ರೋಲ್ ಪಂಪ್ ವರೆಗೆ ಕರ್ನಾಟಕ ಸರ್ಕಾರದ ಸಚಿವರಾಗಿದ್ದ  ದಿ.ಉಮೇಶ ಕತ್ತಿ ಹಾಗೂ ಕ್ಷೇತ್ರದ ಶಾಸಕ ರಮೇಶ ಭೂಸನೂರ  650 ಲಕ್ಷಗಳ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು.

ಅಭಿವೃದ್ಧಿಯ ಭಾಗವಾಗಿ ರಸ್ತೆ ಪಕ್ಕದಲ್ಲಿ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಅಂಗಡಿದಾರರು ತಮ್ಮ ಜೀವನ ನಡೆಸಲು ಕಷ್ಟಕ್ಕೆ ಕಾರಣವಾಗಿದೆ. ಸಂಕಷ್ಟದಲ್ಲಿಯು ಸ್ವಯಂ ಪ್ರೇರಿತವಾಗಿ ತಮ್ಮ  ಅಂಗಡಿಗಳನ್ನು ತೆಗೆದುಹಾಕಿಕೊಂಡಿದ್ದು  ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ತಾಲೂಕಿನ ಜನರು ಅವರ  ನೋವಿನಲ್ಲು ಹೆಮ್ಮೆ ಪಡುವ ಕೆಲಸ ಮಾಡುತ್ತಿರುವುದು ನೋಡಿ ಗೌರವ ವ್ಯಕ್ತಪಡಿಸುತ್ತಿದ್ದಾರೆ.

banner

ಸಿ.ಸಿ.ರಸ್ತೆ ಕಾಮಗಾರಿಯ ಭೂಮಿ ಪೂಜೆ ಮಾಡಲಾಗುವುದು.

ಮುಂದಿನ ದಿನಮಾನಗಳಲ್ಲಿ ಅಂಬೇಡ್ಕರ್ ವೃತ್ತದಿಂದ ಮೋರಟಗಿ ನಾಕಾ ವರೆಗೆ ಸಿ.ಸಿ ರಸ್ತೆಯ ಕಾಮಗಾರಿಯು ಟೆಂಡರ್ ಆಗಿದ್ದು ಮಲಘಾಣ ರಸ್ತೆಯಿಂದ ಬೈಪಾಸ್ ವರೆಗೆ ಡಾಂಬರ್ ರಸ್ತೆಯ ಕಾಮಗಾರಿಯು ಟೆಂಡರ್ ಆಗಿದೆ. ಕೆಲವೆ ದಿನಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗುವುದು ಎಂದು ಶಾಸಕ ರಮೇಶ ಭೂಸನೂರ ತಿಳಿಸಿದರು.

ತೆರವಿನ ಕಾರ್ಯಚರಣೆಯ ಕಾನೂನು ಕೇವಲ ಬಡ ಜನರಿಗೆ ಮಾತ್ರ ಸೀಮಿತಗೋಳಿಸದೆ, ಎಲ್ಲರಿಗೂ ಅನ್ವಯಿಸಲಿ. ರಾಜಕೀಯ, ಪ್ರಭಾವವಾಗದೆ  ಸಿಂದಗಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರು ಸಹಕರಿಸುತ್ತಾರೆ ಎಂಬ ನಂಬಿಕೆಯಿದೆ.                          ಅಬುಬಕರ್ ಡೋಣಿವಾಲೆ                ಬೀದಿ ವ್ಯಾಪಾರಸ್ಥ ಸದಸ್ಯರು ಸಿಂದಗಿ 

ಪ್ರವಾಸಿ ಮಂದಿರದ ಕಂಪೌಂಡ್ ತೆರವಿನ ಚಿತ್ರ

ಸಿಂದಗಿ ಪ್ರವಾಸಿ ಮಂದಿರದ ಕಂಪೌಂಡ್ ತೆರವುಗೊಳಿಸಿದ್ದು, ಎ.ಪಿ.ಎಂ.ಸಿ ಹತ್ತಿರವಿರುವ ಕೆಲವು ಬೀದಿ ಬದಿಯ ಅಂಗಡಿದಾರರು ಇದುವರೆಗೂ ಅಂಗಡಿಗಳನ್ನು ತೆಗೆದುಕೊಂಡಿಲ್ಲ. ಅವರಿಗೆ ಸಮಯ ನೀಡಲಾಗಿದೆ. ಕಾನೂನಾತ್ಮಕವಾಗಿ ತೆರವುಗೊಳಿಸುವುದರಿಂದ ಅವರಿಗೆ ನಷ್ಟ ಆಗಬಹುದು. ಸ್ವಯಂ ಪ್ರೇರಿತವಾಗಿ ತೆಗೆದುಕೋಳ್ಳದಿದ್ದರೆ, ತೆರವಿನ ಕಾರ್ಯಾಚರಣೆ ನಡೆಸುವದು ನಮ್ಮಗೆ ಅನಿವಾರ್ಯ ಎಂದು ಸಿಂದಗಿ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಧಿಕಾರಿ ತಾರಾನಾಥ್ ರಾಠೋಡ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news