Home News ಗೋಠೆಗೆ ತರಾಟೆ ತೆಗೆದುಕೊಂಡ ಶಾಸಕ ಅಶೋಕ | ಪ್ರಥಮ ತ್ರೈಮಾಸಿಕ ಸಭೆ, ಆಡಳಿತದಲ್ಲಿ ಬದಲಾವಣೆಗೆ ಕ್ರಮ ಸಾದ್ಯತೆ

ಗೋಠೆಗೆ ತರಾಟೆ ತೆಗೆದುಕೊಂಡ ಶಾಸಕ ಅಶೋಕ | ಪ್ರಥಮ ತ್ರೈಮಾಸಿಕ ಸಭೆ, ಆಡಳಿತದಲ್ಲಿ ಬದಲಾವಣೆಗೆ ಕ್ರಮ ಸಾದ್ಯತೆ

by vegadhut@gmail.com.
0 comments

ಕೃಷಿ, ನೀರಾವರಿ, ಇಂದನ, ಶಿಕ್ಷಣ,ಸಾರಿಗೆ, ಲೋಕೊಪಯೋಗಿ ಇಲಾಖೆಯಲ್ಲಿನ ಯೋಜನೆಗಳ  ಬಗ್ಗೆ ಮಾಹಿತಿ  ಪಡೆದ ಶಾಸಕ  ಬದಲಾವಣೆ ಆಗಬೇಕಿರುವ ಆಡಳಿತದ ವೈಖರಿ ಹಾಗೂ ಅಲ್ಲಿನ ತಪ್ಪುಗಳ ಬಗ್ಗೆ ಎತ್ತಿ ತೋರಿಸುವ ಪ್ರಯತ್ನ  ನೂತನ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ತ್ರೈಮಾಸಿಕ ಸಭೆಯಲ್ಲಿ  ಅಶೋಕ ಮನಗೂಳಿ ತೋರಿದರು. 

ಸಿಂದಗಿ : ನಾನು ಪ್ರಥಮಬಾರಿಗೆ  ಶಾಸಕನಾಗಿ ಆಯ್ಕೆಯಾದವನು ನನ್ನಗೆ ಆಡಳಿತ  ಅನುಭವದ ಕೊರತೆ ಇದೆ, ಅಧಿಕಾರಿಗಳು ನನ್ನೊಂದಿಗೆ ಸಹಕರಿಸಿ ಉತ್ತಮವಾದ ಆಡಳಿತ ನೀಡುವ ಪ್ರಯತ್ನ ಮಾಡೋಣ ಎಂದು ಸಭೆ ಪ್ರಾರಂಭಿಸಿದರು.

ಕೃಷಿ ಇಲಾಖೆ

ಪ್ರಥಮವಾಗಿ ಕೃಷಿ ಇಲಾಖೆಯ ವಾರ್ಷಿಕ  ವರದಿ ಸಭೆಯಲ್ಲಿ ಅಧಿಕಾರಿ ಎಚ್.ವಾಯ್. ಶಿಂಗೇಗೋಳ ವಿವರಿಸಿದ ನಂತರ  ನೀವು ರೈತರ ಸಭೆ ಮಾಡಿದ್ದೀರಾ, ಪ್ರತಿ ವರ್ಷ ರೈತರ ಮುಂಜಾಗೃತ ಸಭೆ ಕಡ್ಡಾಯವಾಗಿ ಇನ್ನು ಮುಂದೆ ಮಾಡಲೇಬೇಕು ಪ್ರಕೃತಿ ನಮ್ಮ-ನಿಮ್ಮ ಕೈಯಲ್ಲಿ ಇಲ್ಲ ಮುಂಗಾರು ಮಳೆ ನಾವು ಅಂದುಕೊಂಡ ಮಟ್ಟಿಗೆ ಆಗಿಲ್ಲ ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟ ರೈತರ ಪಾಡೇನು? ಮುಂದೇ ಅವರು ಯಾವ ಬೆಳೆ ಬೆಳೆಯಬೇಕು ಅದರ ಬಗ್ಗೆ ಅವರಿಗೆ ಕಾಲ್ಪನಿಕ ಜ್ಞಾನ ವಿದ್ದರು ರೈತರಿಗೆ ವೈಜ್ಞಾನಿಕ ಜ್ಞಾನ ತಕ್ಕ ಮಟ್ಟಿಗೆ ಇರುವುದಿಲ್ಲ ಆದರಿಂದ  ಕೃಷಿ ಇಲಾಖೆಯಲ್ಲಿ ಕಡ್ಡಾಯವಾಗಿ ಮುಂಜಾಗೃತ ಅಭಿಯಾನ  ನಡೆಸಿ  ಅಭಿಯಾನಕ್ಕೆ ನಾನು ಬರುವೆ. ರೈತರ ಬೆಳೆಹಾನಿಯಾದ ನಂತರ  ಸಭೆ ಮಾಡಿ ಎನು ಉಪಯೋಗ ಎಂದರು. ಮುಂದುವರಿದು ಶಾಸಕ ಅಶೋಕ ಮನಗೂಳಿ  ಬೀಜ ವಿತರಣೆಯ ಸಮಯದ ಬಗ್ಗೆ ಅತೀ ದೂರುಗಳು ಆಗಮಿಸುತ್ತಿದ್ದು ಸಾಯಂಕಾಲ 7 ರವರೆಗೆ   ಸಮಯ ಬೀಜ ವಿತರಣೆಗೆ ನೀಡಿ ಎಂದು ಸೂಚಿಸಿದರು.

ಗೋಬ್ಬರ ವಿತರಣೆಗೆ  ಸೋಸೈಟಿಗಳು ಮುಂದೆ ಬರುತ್ತಿಲ್ಲ 

ತಾಲೂಕಿನಲ್ಲಿರುವ ಸಿಂದಗಿ  ಕೃಷಿ ಇಲಾಖೆ ಹಾಗೂ  ಪಿ.ಕೆ.ಪಿ.ಎಸ್. ಹಾಗೂ ಖಾಸಗಿ ಗೋಬ್ಬರ ಮಳಿಗೆಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಲ್ಲ ಕಡೆಯಲ್ಲು ಒಂದೆ ದರದಲ್ಲಿ ಮಾರಾಟ ಮಾಡಬೇಕು ಮತ್ತು ತಾಲೂಕಿನಲ್ಲಿರುವ ಸೋಸೈಟಿಗಳು ಹೇಚ್ಚು ಗೋಬ್ಬರ ಮಾರಟಕ್ಕೆ ಮುಂದೆ ಬರುತ್ತಿಲ್ಲ ಸೋಸೈಟಿಗಳು ನೇರವಾಗಿ ರೈತರ ಸಂಪರ್ಕದಲ್ಲಿರುತ್ತಾರೆ ಅವರು ಹೇಚ್ಚು ಗೋಬ್ಬರ ವಿತರಣೆಗೆ  ಮುಂದಾದರೇ ರೈತರಿಗೆ ಮತ್ತಷ್ಟು ಅನೂಕುಲವಾಗುವುದೆಂದು ಅಧಿಕಾರಿ ಎಚ್.ವಾಯ್. ಶಿಂಗೇಗೋಳ ವಾರ್ಷಿಕ ವರದಿ ಮುಗಿಸಿದರು.

banner

ಸಣ್ಣ ನೀರಾವರಿ

ಒಂದುವರೆ ವರ್ಷವಾಯಿತ್ತು  ಟೆಂಡರ್ ಪ್ರಕ್ರೀಯೆ ಮುಗಿದು  ಗುಂದಗಿ, ಅಲಹಳ್ಳಿ, ಗ್ರಾಮಕ್ಕೆ ಒದಗಿಸಬೇಕಾದ ನೀರು ಸರಬರಾಜು ಯಾಕೇ ಒದಗಿಸಿಲ್ಲ ನೀವು ಮೇಲಾಧಿಕಾರಿಗಳ ಗಮನಕ್ಕೆ  ತಂದಿದ್ದಿರಾ ಎಂದು ಸಣ್ಣ ನೀರಾವರಿ ಇಲಾಖಾ ಅಧಿಕಾರಿ ಎಸ್.ಎಸ್.ವಾಲಿ ಅವರಿಗೆ ಪ್ರಶ್ನೀಸಿದರು ಅದಕ್ಕೆ  ಉತ್ತರಿಸಿದ ವಾಲಿ ತಿಳಿಸಲಾಗಿದೆ ಎಂದರು. ಎನ್ನುತ್ತಿದಂತೆ ತಿಳಿಸಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದ ಪತ್ರ ನೀಡಿ ಎಂದು ಶಾಸಕರು ಕೇಳುತ್ತಿದಂತೆ  ಸುಮನಾದ ಅಧಿಕಾರಿಗಳು  ನೀವು ಆಡಳಿತಾತ್ಮಕವಾಗಿ ಕಾರ್ಯನ್ಮುಖರಾಗದೆ ಇದ್ದರೆ ಸರಿಯಲ್ಲ ನೀವು ಎನ್ನೇ ಇದ್ದರು ಪತ್ರದ ಮುಖಾಂತರ ಇಟ್ಟುಕೋಳ್ಳಿ ಮೌಖಿಕವಾಗಿ ಬೇಡ ಈ ಕಾಮಗಾರಿ ಹಿನ್ನಡೆಗೆ ಕಾರಣವೇನು ಮೋದಲು ತೀಳಿಸಿ ಎಂದು ಶಾಸಕರು ಸೂಚಿಸುತ್ತಿದಂತೆ ಹೋರ ಗುತ್ತಿಗೆ ಆಧಾರದ ಮೇಲೆ ಸೇವೆಸಲ್ಲಿಸುತ್ತಿರುವ ಅಧಿಕಾರಿ ಮೌಶಿನ್ ಇನಾಮದಾರ ಹಳ್ಳದ ಸುತ್ತ ಮುತ್ತಲಿರುವ ರೈತರು ಅಲ್ಲಿ ಭಾವಿ ಹೊಡೆಯಲ್ಲು ಆಕ್ಷೇಪಣೆಗಳು ತರುತ್ತಿದ್ದಾರೆ.   ಊರಿಗೆ ನೀರು ಒದಗಿಸಲು ಬಾವಿ ತೋಡಿದರೆ ಅವರ ಹೊಲಗಳಲ್ಲಿರುವ ಕೋಳವೆಬಾವಿಯ ನೀರಿನ ಮಟ್ಟ ಕುಸಿಯುತ್ತದೆಂದು ಕಾಮಗಾರಿ ಮಾಡಲು ಬಿಡುತ್ತಿಲ್ಲ ಎಂದು ಶಾಸಕರಿಗೆ ತಿಳಿಸಿದರು. ಪ್ರತಿಕ್ರೀಯಿಸಿದ ಶಾಸಕ ಅಶೋಕ ಮನಗೂಳಿ ಸಮಸ್ಯೆ ಬಗ್ಗೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ಮಾಡಿದ್ದೀರಾ? ಇದುವರೆಗು ಮಾಡಿಲ್ಲ. ಹಿಂದೆನೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ  ತಿಳಿಸಿದ್ದರೆ  ಇದುವರೆಗೂ ಕಾಮಗಾರಿ ಮುಗಿಯುತ್ತಿತೇನ್ನೋ ಎನ್ನುತ್ತ ಬೇಸರ ವ್ಯಕ್ತಪಡಿಸುತ್ತಾನೆ  ಇರಲಿ ಗ್ರಾಮಸ್ಥರ ಸಭೆ ಕರೆಯಿರಿ ನಾನು ಬರುವೆ ಮಾತನಾಡಿ ಯಾವುದಾದರೊಂದು ವ್ಯವಸ್ಥೆ ಮಾಡೋಣ ಎಂದು ಹೇಳಿದರು.

ಪ್ರಾರಂಭವಾಗದ ಶುದ್ಧ ಕುಡಿಯುವ ನೀರಿನ ಘಟಕ 

ಕ್ಷೇತ್ರಾದ್ಯಂತ ಒಟ್ಟು 47 ಘಟಕಗಳು ಬಂದಾಗಿದ್ದು  ಅದರಲ್ಲಿ ಸಣ್ಣ ಪುಟ್ಟ ಕಾರಣಗಳಿಂದಾಗಿ 26 ಘಟಕಗಳು ಬಂದಾದರೆ 21 ಘಟಕಗಳು ಪ್ರತಿ ಘಟಕಕ್ಕೆ 5ರಿಂದ 6 ಲಕ್ಷರೂಗಳ ಖರ್ಚು ತಗಲುವುದು ಅಷ್ಟೊಂದು ಹಣ ಸದ್ಯಕ್ಕೆ ನಮ್ಮಲ್ಲಿ ಇಲ್ಲದೆ ಕಾರಣಕ್ಕಾಗಿ ಅವುಗಳನ್ನು ನಾವು ಚಾಲ್ತಿ ಮಾಡಲು ಆಗಿಲ್ಲ ಎಂದು ಮಾಹಿತಿ ನೀಡುತ್ತಿದಂತೆ ಶಾಸಕರು 26 ಘಟಕಗಳಾದರು ಪ್ರರಂಭಿಸಬೇಕಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನೀಸಿದರು. ಅದಕ್ಕೆ ಪ್ರಾರಂಬಿಸಲಾಗುವುದು ಎನ್ನುತ್ತಿದಂತೆ ದಿನಾಮಕ ನಿಗದಿ ಮಾಡಿ ಇಷ್ಟು ದಿನದೊಳಗೆ ಪ್ರರಂಭಿಸುತ್ತೆವೆ ಎಂದು ಹೇಳಿದರು. 15 ದಿನಗಳ ಕಾಲಾವಕಾಶ ಅಧಿಕಾರಿಗಳು ಪಡೆದರು

ವಿದ್ಯುತ್ ಸರಬರಾಜು 

ತಾವರಖೆಡ ನೂತನ ಗ್ರಾಮಕ್ಕೆ ಇದುವರೆಗೂ ಟಿ.ಸಿ ಗಳನ್ನು ಅಳವಡಿಸಿಲ್ಲ ಅಲ್ಲಿ ಮೂಲಭುತ ಸೌಕರ್ಯಗಳಿಲ್ಲದ ಕಾರಣದಿಂದ ಅವರು ಹಕ್ಕುಪತ್ರಗಳು ತೆಗೆದುಕೋಳ್ಳತ್ತಿಲ್ಲ. ನಿಮ್ಮ ಇಲಾಖೆಗೆ  ಸಂಪೂರ್ಣಹಣ  ಭರ್ತಿ ಮಾಡಿದರು ಯಾಕೆ ನೀವು ಕಾಮಗಾರಿ ಪೂರ್ಣ ಗೋಳಿಸುತ್ತಿಲ್ಲ ಎಂದು ಅಧಿಕಾರಿ ವಿಶಾಲ ದರೇಪ್ಪಗೋಳ ಇವರಿಗೆ ಪ್ರಶ್ನೀಸಿದರು. ಮತ್ತು ಇಗ ಮಳೆಗಾಲ ಭೀಮಾನದಿಗೆ ಯಾವಾಗ ನೀರು ಬರುತ್ತೊ ಗೋತ್ತಿಲ್ಲ ಆಗ ತೊಂದರೆ ಅನುಭವಿಸುವುದಕ್ಕಿಂತ ಇಗಲೇ ಅದಕ್ಕೆ ಪರಿಹಾರ ವದಗಿಸಿ ಜನರನ್ನು ನೂತನ ಗ್ರಾಮಕ್ಕೆ ಸ್ಥಳಾಂತರಿಸುವ ಕೆಲಸ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳ ಗ್ರಾಮದಲ್ಲಿ ಸಭೆಗೆ ದಿನಾಂಕ ನಿಗದಿ ಪಡಿಸಿ ಎಂದು ತಾಪಂ ಕಾರ್ಯನಿರ್ವಾಹಕ   ಅಧಿಕಾರಿಗೆ ಸೂಚಿಸಿದರು.

ಗೃಹಜ್ಯೋತಿ ಬಗ್ಗೆ ವಿವರಿಸಿದ ಅಧಿಕಾರಿ ವಿಶಾಲ ದರೇಪ್ಪಗೋಳ ಇದುವರೆಗು 3500 ಪಲಾನುಭವಿಗಳು ಅರ್ಜಿ ಸಲ್ಲಿಸಿದ್ದು  ಸಿಂದಗಿ ಮತ್ತು ಆಲಮೇಲ ವಿದ್ಯತ್ ಸ್ಥಾವರ ಘಟಕ ಮತ್ತು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಅಕ್ರಮ ಟಿ.ಸಿ. ಅಳವಡಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿ

ಕ್ಷೇತ್ರದಲ್ಲಿ ಅಂದಾಜು 1000 ಕ್ಕಿಂತಲೂ ಹೇಚ್ಚಿನ ಅಕ್ರಮ ಟಿ.ಸಿ.ಗಳು  ಚಲಾವಣೆಯಲ್ಲಿ ಇವೆ ನೀವು  ನೇರವಾಗಿ ಅವರ ಟಿ.ಸಿಗಳ ವಿದ್ಯುತ್ ಸಂಪರ್ಕ ತೆಗೆದು ಹಾಕಿದ್ದಿರಿ ಆ ರೀತಿಯಾದ ಕ್ರಮ ತೆಗೆದುಕೊಂಡರೆ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ  ಮುಂಚಿತವಾಗಿ ಒಂದು ಪತ್ರಿಕಾ ಪ್ರಕಟಣೆ ನೀಡಿ ಅವರಿಗೆ ಕಾಲಾವಕಾಶ ನೀಡಿ ಅವರು ನೊಂದಣಿ ಮಾಡಿಕೋಳ್ಳದೆ ಇದ್ದರೆ  ಅವರ ಮೇಲೆ ಕ್ರಮ ತೆಗೆದುಕೋಳ್ಳಿ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಶಿಕ್ಷಣ 

ಶಿಕ್ಷಣ ಿಲಾಖೆಯ ವರದಿ ನೀಡಿದ ಕ್ಷೇತ್ರ ಶೀಕ್ಷಣಾಧಿಕಾರಿ  ನಮ್ಮಗೆ ಶಿಕ್ಷಕ  ಸಿಬ್ಬಂದಿ ಕೊರತೆ ಇದೆ ಅದನ್ನು ಪೂರೈಸಲು   ಪ್ರಸ್ತಾವನೆ ಕಳುಹಿಸಿದ್ದೇನೆ ಇನ್ನು ಕೆಲ ಶಾಲೆಗಳಲ್ಲಿ ಶೌಚಾಲಯ, ತರಬೇತಿ ಕೋಣೆಯ ಅವಶ್ಯಕವಿದ್ದು ಅದನ್ನು ಸಂಭಂಧಪಟ್ಟ ಇಲಾಖೆಗೆ ಪ್ರಸ್ತಾವನೆ ನೀಡುತ್ತೆನೆ ಹಲವು ಕೊಠಡಿಯ ಕಾಮಗಾರಿಗಳು   ನಿರ್ಮಾಣ ಹಂತದಲ್ಲಿವೆ ಎಂದು ವಿವರಿಸಿದರು.

ಪ್ರಾರಂಭವಾಗದ ಶಿಕ್ಷಕರ ಭವನ ಮತ್ತು ರಂಗಮಂದಿರ ಕಾಮಗಾರಿ

ಶಾಸಕ ಅಶೋಕ ಮನಗೂಳಿ ನಗರೋತ್ಥಾನ ಯೋಜನೆ ಅಡಿಯಲ್ಲಿ  ಶಿಕ್ಷಕರ ಭವನ ಮತ್ತು ರಂಗಭೂಮಿ ಕಲಾವಿಧ ಹಂದಿಗನೂರು ಸಿದ್ರಾಮಪ್ಪನವರ ರಂಗಮಂದಿರ  ಮಂಜೂರಾಗಿದ್ದು  ಕಾಮಗಾರಿ ವಿಳಂಬಕ್ಕೆ  ಕಾರಣವೇನು ಎಂದು ಪುರಸಭೆ ಮುಖ್ಯಾಧಿಕಾರಿಗೆ ಪ್ರಶ್ನೀಸಿದರು. ಉತ್ತರಿಸಿದ ಪುರಸಭೆ ಜೆ.ಇ ಅಜ್ಜರುದ್ದೀನ ನಾಟೀಕಾರ ಶಿಕ್ಷಕರ ಭವನದ ಕಾಮಗಾರಿ ಶಿಕ್ಷಕರ ಸಂಘದವರು ಹೇಚಿನ ಹಣ ಸಂಗ್ರಹಿಸಿ ಕೋಡುವುದಾಗಿ ಗುತ್ತಿಗೆದಾರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ ಆ ಕಾರಣದಿಂದ ಕಾಮಗಾರಿ ನಿಂತರೆ ಹಂದಿಗನೂರು ಸಿದ್ರಾಮಪ್ಪನವರ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರನಿಗೆ ತಿಳಿಸಲಾಗುವುದು ಎಂದು ಹೇಳಿದರು.

ಲೊಕೋಪಯೋಗಿ

ಇಲಾಖೆ ಅಧಿಕಾರಿ ತಾರಾನಾಥ ತಮ್ಮ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ವಿವರಿಸಿದ ತಕ್ಷಣ ಸಿಂದಗಿಯ ಕಾನೂನು ಸುವ್ಯವಸ್ಥೆಯ ವೃತ್ತ ನೀರಿಕ್ಷಕರಾದ ಡಿ.ಹುಲಿಗೇಪ್ಪ  ಸಿಂದಗಿ ಪಟ್ಟಣದ ಹೃದಯ ಬಾಗದಲ್ಲಿರುವ ಬಸ್ ನಿಲ್ದಾಣ ಮುಂಬಾಗದ ರಸ್ತೆ ಕಾಮಗಾರಿ ಟ್ರಾಪೀಕ್ ಕಿರಿ ಕಿರಿ ಉಂಟು ಮಾಡುತ್ತಿದೆ ಕಾರಣ ಕಾಮಗಾರಿ ಪೂರ್ಣಮಾಡಿ ಇಲ್ಲವೆ ನಮ್ಮಗೆ ತಾತ್ಕಾಲಿಕ ವ್ಯವಸ್ಥೆಮಾಡಿ ಕೋಡಿ ಎಂದು ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರೀಯಿಸಿದ ಶಾಸಕರು ಆ ಕಾಮಗಾರಿ ಕುರಿತು ದಿನೇ ದಿನೇ ನೇಪಗಳು ಸಲ್ಲದು ಮಳೆಗಾಲ ಪ್ರರಂಭವಾಗುತ್ತಿದೆ ಅದನ್ನು ಒಂದು ವಾರದಲ್ಲಿ ಒಂದು ತೀರ್ಮಾನ ಮಾಡಿ ಇಲ್ಲವೆ ಗುತ್ತಿಗೇದಾರನ ಮೇಲೆ ಕ್ರಮ ಜರುಗಿಸಿ ಬೇರೆ ಗುತ್ತಿಗೇದಾರನಿಗೆ ಕಾಮಗಾರಿ ನೀಡಿ ಎಂದು ತಿಳಿಸದರು.

ಸಮಾಜ ಕಲ್ಯಾಣ

ಸಮಾಜ ಕಲ್ಯಾಣ ಅಧಿಕಾರಿ ಎನ್.ಎಸ್.ಭೂಸಗೊಂಡ  ಕ್ಷೇತ್ರದಲ್ಲಿರುವ ವಸತಿ ನಿಲಯಗಳಿಗೆ ಪರಿಶೀಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಧ್ಯಾರ್ಥಿಗಳ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಹಾಕಿದವರಿಗೇಲ್ಲರಿಗೂ  ಸವಲತ್ತುಗಳು ನೀಡುವ  ಯೋಜನೆ ಸರಕಾರದಾಗಿದೆ. ವಸತಿ ಇರವ ನಿಲಯಗಳ ಅನುಗುಣವಾಗಿ  ವಿಧ್ಯಾರ್ಥಿಗಳನ್ನು ಸೇರಿಸಲಾಗುವುದು. ಬಾಕಿ  ಹೇಚ್ಚು  ವಿಧ್ಯಾರ್ಥಿಗಲು ಉಳಿದರೆ  ಬಾಡಿಗೆ ಕಟ್ಟಡದ ಪರವಾನಗಿ ಮೇಲಾಧಿಕಾರಿಗಳಿಂದ ಪಡೆದು ಮಾಡುತ್ತೇವೆ. ಖಾಸಗಿ ರೂಂ ಮಾಡಿ ಶಾಲೆಗೆ ಹೋಗುವ ಮಕ್ಕಳಿಗೆ    2 ಊಟ 1 ಸ್ನ್ಯಾಕ್ಸ್ 1 ಟೀ ವ್ಯವಸ್ಥೆ ನೀಡಲಾಗುತ್ತದೆ ಎಂದು ವಿವರಿಸಿದರು.

ತಾಲೂಕಾ ಪಂಚಾಯತ  ಮತ್ತು ಪಂಚಾಯತ್ ರಾಜ್ 

ಎಸ್.ಎರ್.ಎಮ್.ಸ್ವಾಮಿ ಇಲಾಖಾ ಕಾಮಾಗಾರಿ ವರದಿ ವಾಚಿಸುತ್ತಿದಂತೆ  ನನ್ನಗೆ ನೀಡಿದ ವರದಿ ಯಾವುದು ನೀವು ಹೇಳುತ್ತಿರುವ ವರದಿಯಾವುದು   ಒಂದಕ್ಕೊಂದು ಸಂಭಂದವಿಲ್ಲ.  2019-2020 ರಲ್ಲಿ ಮಂಜೂರಾದ ಕಾಮಗಾರಿಗಳು ಹಣ  ಖರ್ಚು ಮಾಡಲಾಗಿದೆ ಎಂದು ಬಿಲ್ಲ್ ಮಾಡಲಾಗಿದೆ ಆದರೆ ಕೆಲಸವೇ ಆಗಿಲ್ಲ ಇದೇ ರೀತಿ  ಮಾಡಿದರೆ ಇದು ಸರಿಯಾದದ್ದಲ್ಲ.  ವಾರ್ಷಿಕ ವರದಿ ನೀಡಿದ್ದೀರಿ ಶಾಸಕರ ಬಳಕೆಯ ಹಣದ ವಿವರಗಳೆ ನೀಡಿಲ್ಲ ಅದು ಎಲ್ಲಿ ಹೋಗಿದೆ ಅದನ್ನು ಇದರಲ್ಲಿ ಅಳವಡಿಸಬೇಕಲ್ಲವೆ ಎಂದು ಆಕ್ರೋಶ ವ್ಯಕ್ತವ್ಯಡಿಸಿದರು.

ವ್ಯತ್ಯಾಸಗೊಂಡ ತಾಲೂಕಾ ಪಂಚಾಯತ ಕ್ರೀಯಾಯೋಜನೆ ವರದಿ

ಸಿಂದಗಿ ತಾಲೂಕ ಪಂಚಾಯತ ವಾರ್ಷಿಕ ವರದಿಯಲ್ಲಿ 164 ಲಕ್ಷರೂ ಬಗ್ಗೆ ತಿಳಿಸಲಾಗಿದೆ ಆದರೆ ಖರ್ಚು ಮಾತ್ರ 139 ಲಕ್ಷ ಅದರಂತೆ  ಆಲಮೇಲ ತಾಲೂಕಿನದ್ದು 144 ಲಕ್ಷ ರೂ ನಲ್ಲಿ ಕೇವಲ 127 ಲಕ್ಷ ರೂ ಖರ್ಚಿನ ಬಗ್ಗೆ ತೋರಿಸಲಾಗಿದೆ ಊಳಿದ ಹಣದ ಬಗ್ಗೆ ವರದಿಯಲ್ಲಿ ಇಲ್ಲ ಯಾಕೇ ಎನ್ನುತ್ತಿದಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿವರಿಸಲು ಗೊಂದಲಕ್ಕಿಡಾದರು. ಗೊಂದಲಕಂಡ ಶಾಸಕ ಅಶೋಕ ಮನಗೂಳಿ   ಆಡಳಿತ ಅಧಿಕಾರಿ ನಿಂಗಪ್ಪ ಗೋಠೆ ಇವರಿಗೆ ತರಾಟೆಗೆ ತೆಗೆದುಕೊಂಡು ನೀವು ವಿಜಯಪುರದಿಂದ ಬಂದು ಸಭೆ ಮಾಡುವುದರ ಉಪಯೋಗವೇನು? ನೀವು ಅವರಂತೆ ಮಾತನಾಡಬೇಡಿ ಸ್ವಲ್ಪ ಗಂಭೀರತೆಯಿಂದ ಅವರಿಗೆ  ಹೇಳಿ. ಒಂದೇಡೆ 4 ಲಕ್ಷರೂ ಗಳಲ್ಲಿ ಸಿ.ಸಿ ರಸ್ತೆ ಮಾಡಿದ್ದಾರೆ ಎಂದು ತೋರಿಸಲಾಗುತ್ತದೆ, ಒಂದಡೆ ಒಟ್ಟು ಮೊತ್ತದಲ್ಲಿ ವ್ಯತ್ಯಾಸ ತೋರಿಸಲಾಗುತ್ತದೆ.  4 ಲಕ್ಷಗಳಲ್ಲಿ ಎಂತಹದ್ದು ರಸ್ತೆ  ನಿರ್ಮಾಣ ಮಾಡುತ್ತಿರಿ ಇದು ನೋಡಿದರೆ ನೀವು ಕ್ರೀಯಾಯೋಜನೆ  ಮತ್ತು ಕೆಲಸ ಹೇಗೆ ಮಾಡಿದ್ದೀರಿ ಎಂಬುದು ಗೋತ್ತಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸಾರಿಗೆ

ಸಿಂದಗಿ  ಘಟಕ ವ್ಯವಸ್ಥಾಪಕರಾದ   ರೇವಣಸಿದ್ದ ಖೈನೂರ ಶಕ್ತಿ ಯೋಜನೆ ಬಗ್ಗೆ ಶಾಸಕರಿಗೆ ವರದಿ ವಿವರಿಸಿ  ಇದುವರೆಗು  2.39,562 ಮಹಿಳಾ ಪ್ರಯಾಣಿಕರು  ಸಿಂದಗಿಯಿಂದ ಪ್ರಯಾಣಿಸಿದ್ದು 84,18,819 ಸಿಂದಗಿ ಘಟಕಕ್ಕೆ ಲಾಭ ಬಂದಿದ್ದು ಸರಕಾರದ ಈ ಯೋಜನೆ ಇಂದಾಗಿ  ಮಹಿಳಾ ಪ್ರಯಾಣಿಕರ ಪ್ರಯಾಣದಲ್ಲಿ ಏರಿಕೆ ಕಂಡಿದೆ ಹಾಗೂ ಸಾರಿಗೆ ಇಲಾಖೆಯು ಲಾಭದಾಯಕದಿಂದ ನಡೆಯುತ್ತಿದೆ ಎಂದು ಹೇಳುತ್ತಿದಂತೆ  ಶಾಸಕ ಮದ್ಯಪ್ರವೇಶಿಸಿ ರಾಜ್ಯಾದ್ಯಂತ ಪ್ರತಿಧಿನಕ್ಕೆ 12 ಕೋಟಿ ಸರಕಾರ ಪಾವತಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ ಎಂದರು.

ಸಿಂದಗಿ ಕ್ಷೇತ್ರದಲ್ಲಿ ಹಲವು ಗ್ರಾಮಗಳಿಗೆ  ಬಸ್ ಸೌಲಭ್ಯವಿಲ್ಲ ಆ ಗ್ರಾಮಗಳಿಗೆ ಸೌಲಭ್ಯ ವದಗಿಸುವ ಪ್ರಯತ್ನ ಮಾಡಿ. ಬಹು ಮುಖ್ಯವಾಗಿ ಮಲಘಾಣ, ದೇವರನಾವದಗಿ, ಕುಮಸಗಿ ಮಾರ್ಗವಾಗಿ ಶಂಬೇವಾಡ ಮತ್ತು ದೇವಣಗಾಂವ ಮೂಲಕವಾಗಿ ಅಪಜಲಪುರಕ್ಕ ಒಂದು  ಬಸ್ ತುರ್ತಾಗಿ ಬೀಡಿ ಎಂದು ಸೂಚಿಸಿದರು.

ಪೋಲೀಸ

ನಗರದಲ್ಲಿ ಟ್ರಾಪೀಕ್ ಸಮಸ್ಯೆ ಇದೆ,   ರಾತ್ರಿ ಗಸ್ತು ತಿರುಗಾಡಲು ಪೋಲೀಸರಿಗೆ ತಿಳಿಸಿ ರಾತ್ರಿಗಸ್ತು ತಿರುಗಾಡುವುದಿಲ್ಲ. ಮತ್ತು ಬೆಳ್ಳಿಗೆ ಕಾಲೇಜಿನ ಸಮಯದಲ್ಲಿ ಅನಾವಶ್ಯಕವಾಗಿ ಯುವಕರು ಕಾಲೇಜು ಮುಂಬುಗದಲ್ಲಿ  ಬೈಕ್ ನಲ್ಲಿ ತಿರುಗಾಡುತ್ತಿರುವುದು ಕಂಡುಬರುತ್ತದೆ ಅಂತವರಿಗೆ ಕಡಿವಾಣ ಹಾಕಿ  ಅವರ ಮೇಲೆ ಕ್ರಮ ಕೈಗೋಳ್ಳಿ ಕೇವಲ ಒಂದು ಎರಡು ದಿನಕ್ಕೆ ನೆಪ ಮಾತ್ರಕ್ಕೆ ಮಾಡಬೇಡಿ ದಿನನಿತ್ಯ ಕಾರ್ಯೋನ್ಮುಖರಾಗಿ ಸೇವೆ ವದಗಿಸಿ ೆಂದು ಸಿ.ಪಿ.ಆಯ್. ಡಿ.ಹುಲಿಗೇಪ್ಪ ಅವರಿಗೆ ತಿಳಿಸಿದರು

ವಿವಿಧ ಇಲಾಖೆಯ ಅಧಿಕಾರಿಗಳು ವರದಿ ವಾಚಿಸಿದರು. ಸಿಂದಗಿ ಮತ್ತು ಆಲಮೇಲ ತಾಲೂಕಾ  ದಂಡಾಧಿಕಾರಿಗಳು ಸಭೆಗೆ ಗೈರಾಗಿದ್ದರು. ಆಡಳಿತ ಅಧಿಕಾರಿ ನಿಂಗಪ್ಪ ಗೋಠೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ವೇದಿಕೆಯಲ್ಲಿದ್ದರು ವಿವಿಧ ಅಧಿಕಾರಿಗಳ  ಉಪಸ್ಥಿತಿಯಲ್ಲಿ  ಸಬೆ ಜರುಗಿತು.

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news