Home Uncategorized ಮತದಾನ ದೇಶಕ್ಕೆ ಜೀವದಾನ

ಮತದಾನ ದೇಶಕ್ಕೆ ಜೀವದಾನ

by vegadhut@gmail.com.
0 comments

|| ಮತದಾನ ಹಕ್ಕು ||
“ಮಾಡಿ ಮತದಾನ ನೀಡಿ ಜೀವದಾನ
ಮರಿಬೇಡ ನಿಮ್ಮ ಹಕ್ಕು ಇದುವೇ ನಿಮ್ಮ ಕರ್ತವ್ಯ
ನಿಮ್ಮ ಮತದಾನ ದೇಶಕ್ಕೆ ಜೀವದಾನ”

ಸಂವಿಧಾನ ಶಿಲ್ಪಿ ಭಾರತ ನಾಡು ಕಂಡ ಶ್ರೇಷ್ಠ ಕಾನೂನು ದಿಗ್ಗಜರಾದ ಡಾ|| ಬಾಬಾ ಸಾಹೇಬ ಅಂಬೇಡ್ಕರ ಅವರು ಇಡೀ ವಿಶ್ವದಲ್ಲಿಯೇ ಭಾರತಕ್ಕೆ ಅತ್ಯುನ್ನತ ಲಿಖಿತ ಸಂವಿಧಾನ ನೀಡಿದ್ದು ಪ್ರತಿಯೊಬ್ಬ ಪ್ರಜೆಗೂ ದ್ವನಿ ಎತ್ತಿ ತಲೆ ಎತ್ತಿ ಮಾತನಾಡುವ ಮೂಲಕ ದೇಶದ ಜನತೆಗೆ ಮಾದರಿಯಾಗುವ ಮೂಲಕ ದ್ವನಿಯಾಗಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಮತದಾನ ಮಾಡುವುದು ಒಂದು ಹಕ್ಕಾಗಿ ಜನರ ಸಾಧನೆಯಾಗಿದೆ ಎಂದು ಮರೆಯಬಾರದು ಎಂಬುದನ್ನು ತೋರಿಸಿ ಕೊಟ್ಟವರು ಪ್ರತಿಹಳ್ಳಿ, ತಾಲೂಕು, ಜಿಲ್ಲೆಯಲ್ಲಿ ಹದಿನೆಂಟು (18) ವರ್ಷ ಮೇಲ್ಪಟ್ಟವರೆಲ್ಲರೂ ಮತದಾನ ಮಾಡುವ ಹಕ್ಕು ಪಡೆದಿರುತ್ತಾರೆ. ಇಲ್ಲಿ ಗಂಡು–ಹೆಣ್ಣು ಎಂಬ ಭೇದ ಭಾವ ಇಲ್ಲ. ಪ್ರತಿಯೊಬ್ಬರು ತಮ್ಮ ವಯಸ್ಸಿಗೆ ಅನುಗುಣವಾಗಿ ಮತದಾನ ಮಾಡುವ ಹಕ್ಕು ಪಡೆದಿರುತ್ತಾರೆ. ಮತ್ತು ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಆದ್ಯ ಕರ್ತವ್ಯವಾಗಿದೆ.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮತ್ತು ಮತದಾನ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಪ್ರಜಾಪ್ರಭುತ್ವವು ಸರ್ಕಾರದ ಒಂದು ರೂಪವಾಗಿದೆ ಇಲ್ಲಿ ಕೊನೆಯ ನಿರ್ಧಾರ ಜನರ ಮೇಲೆ ಇರುತ್ತದೆ. ಪ್ರಜೆಗಳು ಆರಿಸಿ ತಂದ ಚುನಾಯಿತ ವ್ಯಕ್ತಿಯ ಮೂಲಕ ಸರ್ಕಲಾರ ದನಿರ್ಧಾರಗಳು ತೆಗೆದುಕೊಂಡು ನಂತರ ಅವುಗಳನ್ನು ಜನರ ಸಲುವಾಗಿ ಮತ್ತು ಚುನಾಯಿತ ವ್ಯಕ್ತಿಯು ಊರಿನ ಅಭಿವೃದ್ದಿಗಾಗಿ ಇರುತ್ತದೆ.

ಗ್ರೀಕ್ ಭಾಷೆಯಲ್ಲಿ ಡೆಮಾಕ್ರಸಿಸ್ ಎಂಬ ಶಬ್ದದ ಅರ್ಥ ಡೆಮಾಸ್ ಎಂದರೆ ಜನರು ಮತ್ತು ಕ್ರಾಸಿಸ್ ಎಂದರೆ ಆಳುವ ಶಕ್ತಿ ಅಂದರೆ ಪ್ರಜಾಪ್ರಭುತ್ವದಲ್ಲಿ ಇದು ಜನರ ಶಕ್ತಿಯನ್ನುಸೂಚಿಸುತ್ತದೆ. ಎಲೆಕ್ಷನ್ ಎಂದರೆ ಆಯ್ಕೆ ಅಥವಾ ಮತಚಲಾಯಿಸಿ ಸರಿಯಾದ ವ್ಯಕ್ತಿಯನ್ನು ಆರಿಸಿ ತರುವುದು ಎಂದರ್ಥ. ಭೂಮಿಯ ಮೇಲೆ ನಮ್ಮ ಪ್ರಜಾಪ್ರಭುತ್ವದಲ್ಲಿ ಸರಿ ಎನ್ನಬಹುದು ನಮ್ಮ ಪ್ರಜೆಗಳಿಗೆ ಒಂದು ಹಬ್ಬವೇ ಸರಿ ಎನ್ನಬಹುದು ಇಲ್ಲಿ ಪ್ರತಿಯೊಬ್ಬರು ವಯಸ್ಸಿನ ಅರ್ಹಮಿತಿಯಲ್ಲಿರುವ ಪ್ರಜೆಗಳು ಮತದಾನ ಮಾಡಲೇಬೇಕು.

banner

ಪ್ರತಿಯೊಬ್ಬ ಪ್ರಜೆಯೂ ದೇಶದ ಜೀವನಾಡಿ ಇದ್ದಂತೆ ಪ್ರಜಾಪ್ರಭುತ್ವದ ಅಡಿಪಾಯವೇ ಮೊದಲು ನಮ್ಮ ಪ್ರಜೆಗಳು ಸ್ವಾತಂತ್ರ ಪ್ರಝಾಪ್ರಭುತ್ವದ ರಾಷ್ಟ್ರವಾಘಗಿರುವುದರಿಂದ ಇಲ್ಲಿ ಜನರಿಂದ, ಜನರಿಗಾಗಿ ಜನರಿಗೋಸ್ಕರ ನಡೆಸುವ ಸರ್ಕಾರವೇ ಪ್ರಜಾಪ್ರಭುತ್ವವಾಗಿದೆ. ಇಲ್ಲ; ಬಡವ-ಶ್ರೀಮಂತ, ಜಾತಿ, ಭೇದ-ಭಾವ, ಧರ್ಮಯಾವುದು ಮಧ್ಯಇಲ್ಲ. ಇಲ್ಲಿ ಸರ್ವರು ಸಮಾನತೆಯ ಪ್ರತಿಕವಾಗಿದ್ದಾರೆ.

ಇದು ಮುಕ್ತ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಸಹಾಯ ಮಾಡುತ್ತದೆ. ಇಲ್ಲಿ ಸರ್ಕಾರವು ಜನರಿಗೆ ಜವಬ್ದಾರಿಯುತವಾಗಿರಲು ಮತ್ತು ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಜಕೀಯ ಕ್ಷೇತ್ರಗಳಲ್ಲಿ ಒಮ್ಮತದಿಂದ ತೊಡಗಿಸಿಕೊಳ್ಳಲು ಸ್ವತಂತ್ರವಾಗಿ ಸಹಾಯ ಮಾಡುತ್ತದೆ.

ಪ್ರಕಜೆಗಳೇ ಪ್ರಭುಗಳು ಅನ್ನುವ ಹಾಗೇ ಶಿಕ್ಷಣ ಹೊಂದಿ ಎರುವ ಪ್ರಜೆಗಳು ದೇಶದ ಹಿತಕ್ಕಾಗಿ, ತಮ್ಮ ಜನರ ಒಳಿತಿಗಾಗಿ ಮತ್ತು ಚುನಾಯಿತ ಊರಿನ ಕೆಲಸದ ಅಭಿವೃದ್ಧಿಗಾಗಿ ಶ್ರಮಿಸುವಂತಿರಬೇಕು ಸದಾ ಜನರ ಕೂಗಿಗೆ ಸ್ಪಂದನೆ ನೀಡಬೇಕು ಬಡವ ಶ್ರೀಮಂತ ಎನ್ನದೆ ಎಲ್ಲಾ ಜನ ಭಾಂಧವರು ನಮ್ಮವರೇ ಎಂದು ಗುರುತಿಸಿಕೊಳ್ಳಬೇಕು ಇದು ಎಲ್ಲಾದಕ್ಕೂ ಸ್ಪೂರ್ತಿ ನಾವು ಪ್ರಜೆಗಳು ಎನ್ನಬಹುದು ಏಕೆಂದರೆ ಸರಿಯಾದ ವ್ಯಕ್ತಿಯನ್ನು ಆರಿಸಿ ತರುವ ಸಂಪೂರ್ಣ ಹಕ್ಕು ವಿದ್ಯಾವಂತ ಜನರ ಮೇಲಿದೆ. ಜಾತಿ ರಾಜಕಾರಣ ಹಿಂದಿನಿಂದ ಬಂದಮನೆ ಯಜಮಾನರೆ ಒಡನಾಟದ ರಾಜಕಾರಣ ಮಾಡದೇ ಸರಿಯಾದ ವ್ಯಕ್ತಿಯನ್ನು ಆರಿಸಿ ತರುವುದು ನಮ್ಮೆಲ್ಲರ ಹೊಣೆ. ಇದು ಒಬ್ಬರು-ಇಬ್ಬರಿಂದ ಸಾಧ್ಯವಿಲ್ಲ ಎಲ್ಲಾ ಜನರು ಕೂಡಿಕೊಂಡು ಒಮ್ಮತದಿಂದ ಚುನಾವಣೆ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ನಾವು ಏಕಕಾಲಕ್ಕೆ ಮತಚಲಾಯಿಸಬೇಕು ಎಂದರೆ ನಮ್ಮ ಹಕ್ಕುಗಳನ್ನು ಕೇಳಲು ಮತ್ತು ನಮಗೆ ಬೇಕಾದುದನ್ನು ಜಾರಿಗೆ ತರಲು ನಾವು ಮತಚಲಾಯಿಸಬೇಕು. ಮತದಾನವು ನಮ್ಮ ದೇಶವು ನಮಗೆ ನೀಡುವ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಮತದಾನ ಮಾಡುವ ಮೂಲಕ ಶ್ರೇಷ್ಠ, ನ್ಯಾಯ ಸಮ್ಮತವಾದ ಕಾನೂನು ಚೌಕಟ್ಟಿನ ಒಳಗಾಗಿರುವ “ಸತ್ಯ ಮೇವ ಜಯತೆ” ಎಂಬ ವಾಕ್ಯವನ್ನು ಯಾವಾಗಲೂ ಎತ್ತಿಹಿಡಿದು, ಜನರ ಕೂಗಿಗೆ ಒಮ್ಮತದಿಂದ ಜನರ ಬೆನ್ನಲು ಬಾಗಿ ಹಗಲು-ರಾತ್ರಿ ಎನ್ನದೇ ಜನರಿಗೋಸ್ಕರ ತಮ್ಮ ಊರಿಗೋಸ್ಕರ ಜನರ ಬೆಂಬಲಕೋಸ್ಕರ ಸದಾ ಸಿದ್ದರಿರುವ ವ್ಯಕ್ತಿಯನ್ನು ಆರಿಸಿ ತರುವುದು ಲಕ್ಷಣವಾಗಿದೆ.

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ಏನೆಂದರೆ “Bad Politician are Created by good People who do not vote” ಒಳ್ಳೆಯ ವ್ಯಕ್ತಿಗಳು ನಿರ್ಲಕ್ಷವಹಿಸಿ ಮತದಾನ ಮಾಡದಿದ್ದರೆ ಕೆಟ್ಟವ್ಯಕ್ತಿಗಳು ಅಥವಾ ರಾಜಕಾರಣಿಗಳು ಗೆದ್ದು ಪ್ರಜಾಪ್ರಭುತ್ವದ ಪದಕ್ಕೆ ಅಪಚಾರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಿ ತಮ್ಮ ಊರಿಗೆ ಮಾತ್ರವಲ್ಲ ದೇಶಕ್ಕೆ ಜೀವದಾನ ಮಾಡಬೇಕು. ಹಣದ ಆಮಿಷೆಗೆ ಬಲಿಯಾಗದೆ ಪ್ರತಿಯೊಬ್ಬ ಪ್ರಜೆಯೂ ನಿಷ್ಠಾವಂತ ನಾಯಕನನ್ನು ಆರಿಸಿ ತರುವ ಜವಬ್ದಾರಿ ಹೊರಬೇಕು ಅಂದಾಗಹಳ್ಳಿ, ತಾಲೂಕು, ಜಿಲ್ಲೆ, ರಾಜ್ಯ ಮತ್ತು ದೇಶ ಉತ್ತಮ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.

ಹಣ ತೆಗೆದುಕೊಂಡು ಮತದಾನ ಮಾಡಿದ್ದೇ ಆದಲ್ಲಿ ನಾವು ದ್ವನಿ ಎತ್ತಿ ಬೇಕಾದ ಸೌಲಭ್ಯಗಳನ್ನು ಕೇಳಲು ಅರ್ಹರಿರುವುದಿಲ್ಲ ನಾವುಗಳು ನಮ್ಮ ಕೆಲಸ ಬೇಗ ಆಗಲು ಹಣವನ್ನು ನೀಡುವುದರಿಂದ “ಭ್ರಷ್ಟಾಚಾರ” ಎಂಬುದು ನಮ್ಮಿಂದಲೇ ಶುರುವಾಗುತ್ತದೆ. ಆದ್ದರಿಂದ ಸರ್ಕಾರೇತರ ಕಛೇರಿಗಳಲ್ಲಿ ಹಣವನ್ನು ನೀಡದೆ ಕಾನೂನಿನ ಬದ್ಧವಾಗಿ ಶಾಸನಗಳ ಕುರಿತು ಅರ್ಥೈಸಿಕೊಂಡು ಅಷ್ಟುದಿನದ ಒಳಗಾಗಿ ನಮ್ಮ ಕೆಲಸ ಮಾಡಿಸಿಕೊಳ್ಳುವ ಜವಬ್ದಾರಿಯುತ ಪ್ರಜೆಗಳು ನಮಗೆಬೇಕು. ಇಂದಿನ ಯುವಕರೇ ನಾಳಿನ ನಾಡಿನ ನಾಗರೀಕರು ಆಗಿರಿವುದರಿಂದ ಪ್ರಜಾಸತ್ತಾತ್ರಕ ರಾಷ್ಟ್ರದಲ್ಲಿ ಪ್ರಜೆಗಳಿಗೆ ಚುನಾಯಿತ ವ್ಯಕ್ತಿವ ಮತ್ತು ಸರಕಾರದಿಂದ ಸೌಲಭ್ಯಗಳು ಸಿಕ್ಕ ಸಹಾಯಕ್ಕೆ ನೆರವಾಗಬೇಕು ಎಂದು ನಮ್ಮ ಕಳಕಳಿಯ ಮನವಿ ಎಂದು ಹೇಳಿದರು.

ಲೇಖನ

ಸೀಮಾ ಪ್ರವೀಣ  ಕಂಟಿಗೊಂಡ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news