
ಸಿಂದಗಿ: ಪಟ್ಟಣದ ಒಳ ಮುಖ್ಯ ರಸ್ತೆಯಲ್ಲೊಂದಾದ ವಾರ್ಡ್ ನಂ 18 ಮತ್ತು 19 ರ ಮದ್ಯದಲ್ಲಿರುವ ರಸ್ತೆ ಕುರಿತು ಈ ಹಿಂದೆ ವೇಗದೂತ ಜನದನಿ ಸುದ್ದಿ ಪ್ರಕಟವಾದರು ರಸ್ತೆಕಡೆ ಯಾವ ಅಧಿಕಾರಿಗಳು ಹಿಂತಿರುಗಿ ನೋಡಿರಲಿಲ್ಲ.
ಇಂದು ಬೆಳಿಗ್ಗೆ ದಿನ ನಿತ್ಯದ ಶಾಲಾ ಮಕ್ಕಳಿಗೆ ಶಾಲೆಗೆ ಬಿಡಲು ಹೋಗುತ್ತಿದ್ದ ಪಾಲಕರಾದ ಆನಂದ ಕುರಡೆ ಮಕ್ಕಳೊಂದಿಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೇನು ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಹೇಳಿದರು. ಚುನಾಯಿತ ಪ್ರತಿನಿಧಿಗಳು ಎಲ್ಲಿದ್ದೀರಿ? ಜನರ ಜೀವದೊಂದಿಗೆ ಆಟ ಆಡುವುದು ನಿಲ್ಲಿಸಿ ಇಲ್ಲಿ ಸರಣಿ ಅಪಘಾತಗಳು ಸಹಜವಾಗಿದೆ. ಎನ್ನಾದರು ಅನಾಹುತ ವಾದರೆ ನೇರವಾಗಿ ತಾವೇ ಹೊಣೆಗಾರರು ಎಂದು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಂದೆ ಅದಕ್ಕೆ ಸಂಪೂರ್ಣ ವಾಗಿ ರಸ್ತೆ ಮಾಡದೆ ಇದ್ದರು ಸದ್ಯಕ್ಕೆ ತಾತ್ಕಾಲಿಕವಾದ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುವೆ. ನಾನೇ ಖುದ್ದಾಗಿ ಹೋಗಿ ಪರಿಶೀಲನೆ ಮಾಡುತ್ತೇನೆ. ಹಣಮಂತ ಸುಣಗಾರ ಅಧ್ಯಕ್ಷರು ಪುರಸಭೆ ಸಿಂದಗಿ
ಈ ಹಿಂದೆ ವೇಗದೂತ ಜನದನಿಯ ಸುದ್ದಿ
