Home News ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣದ  ಭೂಮಿ ಪೂಜೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣದ  ಭೂಮಿ ಪೂಜೆ

by vegadhut@gmail.com.
0 comments

ಸಿಂದಗಿ:  ಹಾಲುಮತಸ್ಥರು ಹಾಲಿನಷ್ಟೇ ಪವಿತ್ರರು, ವಿಷ ಕೊಟ್ಟವರಿಗೆ ಹಾಲು ಉಣಿಸುವ ಸಮಾಜ ಹಾಲುಮತ ಸಮಾಜ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಬಣ್ಣಿಸಿದರು. ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ವೃತ್ತದ  ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು

ಕಿತ್ತೂರ ರಾಣಿ ಚನ್ನಮ್ಮನ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸುತ್ತ ಅತ್ಯಂತ ಪ್ರಾಮಾಣಿಕವಾಗಿ ಹೋರಾಡಿ, ಬ್ರಿಟಿಷರ ನೂರಾರು ರುಂಡಗಳನ್ನು ಚೆಂಡಾಡಿ, ಬ್ರಿಟಿಷರಿಗೆ ಚಳಿ ಬಿಡಿಸಿದ ಕೀರ್ತಿ ರಾಯಣ್ಣರಿಗೆ ಸಲ್ಲುತ್ತದೆ. ನಮ್ಮ ನಾಡು ನುಡಿಗಾಗಿ ಹೋರಾಟ ಮಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಹಾಲುಮತ ಸಮಾಜ ಭಾಂದವರು ಯುವ ಪೀಳಿಗೆಗೆ ರಾಯಣ್ಣರ ಆದರ್ಶಗಳನ್ನು ತಿಳಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಮತ್ತು  ನೀವೆಲ್ಲರೂ ಒಗ್ಗಟ್ಟಿನಿಂದ ವೃತ್ತ ನಿರ್ಮಿಸುತ್ತಿರುವುದು ಸಂತಸ ತಂದಿದೆ.  ನಾನು ಕೂಡ ತಮ್ಮ ಜೊತೆ ಪಾಲ್ಗೊಂಡು ವೃತ್ತ ನಿರ್ಮಾಣಕ್ಕೆ ವ್ಯಯಕ್ತಿಕ ಸಹಾಯಾಸ್ತ ನೀಡುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ಪ್ರಸೂತಿಯಲ್ಲಿ ಬಿಪಿ ಕಡಿಮೆಯಾಗಿ ಶಾಯಿದ ರಿಯಾಜ ಅರಕೇರಿ ಮಹಿಳೆ ಮೃತಪಟ್ಟಿದ್ದು  ಕಾರ್ಯಕರ್ತರೊಂದಿಗೆ ಮನೆಗೆ ಭೇಟಿನೀಡಿ  ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.

banner

ಇದೇ ವೇಳೆ ಮುಖಂಡ ಮಲ್ಲಣ್ಣ ಸಾಲಿ, ಮಾಜಿ ಜಿ, ಪಂ,ಸದಸ್ಯ ಗುರುರಾಜ ಪಾಟೀಲ, ಸಂಗನಗೌಡ ಬಿರಾದಾರ, ಶರಣಗೌಡ ಬಿರಾದಾರ, ಸುರೇಶ ಚೌಧರಿ, ಸುಬಾಸ ಜಾಲವಾದ, ಸೂರ್ಯಕಾಂತ ಕಲ್ಲೂರ, ಅಂಜುಮನ್ ಕಮೀಟಿ ಅಧ್ಯಕ್ಷ ಚಾಂದಸಾಬ ಬಾಗವನ, ದುಂಡಪ್ಪ ನಣದಿ, ಶ್ರೀಮಂತ ಹಾಳಕೇರಿ, ಸಂಗಪ್ಪ ಪತ್ತಾರ, ಮಾಜಿ ತಾ.ಪಂ. ಸದಸ್ಯ ಮಡ್ದಪ್ಪ ಸೊನ್ನದ, ಮಾಳಪ್ಪ ಏಳೂರೇ, ಸುರೇಶ ಚೌದ್ರಿ, ಸುಭಾಸ ಜಾಲವಾದ, ಸೂರ್ಯಕಾಂತ ಕಲ್ಲೂರ, ಶಿವಲಿಂಗ ವಗ್ಗಿ, ಸಿದ್ದಗೊಂಡ ಹಿರೇಕುರುಬರ, ಪರಸು ಹಿರೇಕುರುಬರ ಸೇರಿದಂತೆ ಗ್ರಾಮಸ್ಥರು ಇದ್ದರು.

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news