Home News ಸ್ಥಳಿಯ ಕಲಾವಿದರು ನಟಿಸಿರುವ ಪ್ರೀತಿ ವಿಸ್ಮಯ ಕಿರುಚಿತ್ರ ಜ. 31 ರಂದು ಬಿಡುಗಡೆ

ಸ್ಥಳಿಯ ಕಲಾವಿದರು ನಟಿಸಿರುವ ಪ್ರೀತಿ ವಿಸ್ಮಯ ಕಿರುಚಿತ್ರ ಜ. 31 ರಂದು ಬಿಡುಗಡೆ

by vegadhut@gmail.com.
0 comments

ಸಿಂದಗಿ: ಇಂದಿನ ಯುವ ಪೀಳಿಗೆಗೆ ಪೂರಕವಾದ ಸಂದೇಶ ಸಾರುವ ಪ್ರೀತಿ ವಿಸ್ಮಯ ಕಿರುಚಿತ್ರ ಇದೇ ಜನವರಿ 31ರಂದು ಬಿಡುಗಡೆಯಾಗಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಗುರುರಾಜ ಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹಲವಾರು ಅಡೆತಡೆಗಳನ್ನು ದಾಟಿ ನಮ್ಮ ಚಿತ್ರ ಈಗ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಹೆಸರಾಂತ ಪ್ರೋಡಕ್ಷನ್ ಸಂಸ್ಥೆಯಾದ ಟ್ರೂ ಲೈಟ್ಸ್ ಯುಟ್ಯೂಬ್ ಚಾನಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆಯನ್ನು ಸಂಸ್ಥೆಯ ಮುಖ್ಯಸ್ಥರಾದ ರಘುಚಂದ್ರ ಬಿರಾದಾರ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಕಾಲೇಜು ಹಂತದಲ್ಲಿ ಓರ್ವ ಕೆಳ ಮದ್ಯಮ ವರ್ಗ ಕುಂಟುಬದ ಯುವಕನಿಗಾಗುವ ಆರ್ಕಷಣೆಯ ಮೂಲದಿಂದ ಶುರುವಾಗುವ ಈ ಚಿತ್ರ ಆತನ ಜೀವನಕ್ಕೆ ತಿರುವು ನೀಡಿ ಮುಕ್ತಾಯಗೊಳ್ಳುತ್ತದೆ. ಈ ಕಿರುಚಿತ್ರವು ಪ್ರೀತಿ, ಸ್ನೇಹಿತರ ಜೊತೆಗಿನ ಬಾಂದವ್ಯ, ಅಣ್ಣ-ತಂಗಿಯ ವಾತ್ಸಲ್ಯ, ತಾಯಿಯ ಮಮಕಾರ, ಗುರುವಿನ ಮಾರ್ಗದರ್ಶನ ಸೇರಿದಂತೆ ಹಲವು ಪ್ರಮುಖ ಪಾತ್ರಗಳನ್ನೊಳಗೊಂಡಿದೆ ಎಂದರು..

ಕರೋನಾ ಎರಡು ಅಲೆಗಳ ಮುಂಚಿತವಾಗಿಯೇ ಚಿತ್ರೀಕರಣ ಮುಕ್ತಾಯವಾಗಿತ್ತು. ಆರ್ಥಿಕ ಸಮಸ್ಸೆಯಿಂದ ಹಲವಾರು ತಾಂತ್ರಿಕ ಕಾರ್ಯಗಳು ಸ್ಥಗಿತವಾಗಿದ್ದವು. ಇದೀಗ ಚಿತ್ರದ ಬಿಡುಗಡೆಗೆ ಶುಭಗಳಿಗೆ ಕೂಡಿ ಬಂದಿದೆ ಈ ಚಿತ್ರದ ಟ್ರ್ಯಲರ್‌ನ್ನು 2020ರಲ್ಲಿ ಮುಖ್ಯ ನಿರ್ಮಾಪಕರಾದ ಅನೀಲ ಹಿರೇಮಠರವರ ಹುಟ್ಟುಹಬ್ಬದ ನಿಮತ್ತ ಬಿಡುಗಡೆ ಮಾಡಲಾಗಿತ್ತು. ಕೆಲವೇ ವಾರಗಳಲ್ಲಿ 3ಲಕ್ಕಕ್ಕೂ ಅಧಿಕ ವೀಕ್ಷಣೆ ಪಡೆದು ಭಾರತೀಯ ಕಿರುಚಿತ್ರ ಇತಿಹಾಸದಲ್ಲೇ ಮೈಲಿಗಲ್ಲು ಸೃಷ್ಠಿಸಿತ್ತು. ವೀಕ್ಷಕರಿಂದ ವ್ಯಾಪಕ ಪ್ರಶಂಶೆ ವ್ಯಕ್ತವಾಗಿತ್ತು. ಈ ಚಿತ್ರದಲ್ಲಿ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸಿದ್ದು ಕಾರ್ಯಕಾರಣಿ ನಿರ್ಮಾಪಕನ ಜವಾಬ್ದಾರಿಯ ಜೊತೆಗೆ ಖಳ ನಾಯಕರ ಪಾತ್ರವನ್ನು ನಿರ್ವಹಿಸಿರುವೆ ಎಂದು ಹೇಳಿದರು.ಈ ವೇಳೆ ನಟ ವಿಶ್ವಪ್ರಕಾಶ ಮಲಗೊಂಡ, ನಿರ್ಮಾಪಕ ಅನೀಲ ಹಿರೇಮಠ ಇದ್ದರು.

ಪ್ರೀತಿ ವಿಸ್ಮಯ ಕಿರುಚಿತ್ರ ನಿರ್ಮಾಣಕ್ಕೆ ೧ ಲಕ್ಷ ೨೦ ಸಾವಿರ ರೂ ವೆಚ್ಚವಾಗಿದ್ದು ಈ ಚಿತ್ರದಲ್ಲಿ ನಮ್ಮೂರಿನ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಕಾಲೇಜು ವಿದ್ಯಾರ್ಥಿಗಳು, ಪೋಷಕ ವರ್ಗವು ನೋಡಲೇ ಬೇಕಾದ ಚಿತ್ರವಾಗಿದ್ದು ಈ ಚಿತ್ರ ಬಿಡುಗಡೆಯ ನಂತರ ಪ್ರಭಂದ ಸ್ಪರ್ಧೆಯನ್ನು ಏರ್ಪಡಿಸಿ ನಗದು ಬಹುಮಾನವನ್ನು ವಿತರಿಸಲಾಗುವುದು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news