Home News ಪುರಸಭೆ ಅಧಿಕಾರಿಗಳಿಂದ ಸ್ವಚ್ಛತಾ ಆಂದೋಲನ | ಕಾರ್ಯನಿರತ ಪತ್ರಕರ್ತರ ಸಂಘ ಭಾಗಿ

ಪುರಸಭೆ ಅಧಿಕಾರಿಗಳಿಂದ ಸ್ವಚ್ಛತಾ ಆಂದೋಲನ | ಕಾರ್ಯನಿರತ ಪತ್ರಕರ್ತರ ಸಂಘ ಭಾಗಿ

by vegadhut@gmail.com.
0 comments

ಸಿಂದಗಿ :  ನಗರದ ವಿಧ್ಯಾನಗರ ಮೂರನೇ ಕ್ರಾಸ್ ನಲ್ಲಿರುವ ಶ್ರೀ ಚನ್ನವೀರಸ್ವಾಮಿಜಿ ಉದ್ಯಾನವನದಲ್ಲಿ ಪುರಸಭೆ ಮುಖ್ಯಾಧಿಕಾರಿ  ರಾಜಶ್ರೀ ತುಂಗಳ  ಅವರು ಸ್ವಚ್ಚತಾ ಆಂದೋಲನ ಪ್ರಾರಂಭಿಸಿದರು.            ಸಿಂದಗಿ  ಪುರಸಭೆಯ ವತಿಯಿಂದ ಪ್ರತಿ ಮೊದಲನೇ  ಶನಿವಾರ ಮತ್ತು ಮೂರನೇ ಶನಿವಾರ ಜನರು ಉಪಯೋಗಿಸುವ  ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳನ್ನು ಸ್ವಚ್ಛತೆ ಮಾಡಬೇಕೆಂಬ ಕಾರಣದಿಂದಾಗಿ ಇಂದು ಪ್ರಥಮವಾಗಿ  ನಗರದ ಒಂದನೇ ವಾರ್ಡನ ಉದ್ಯಾನವನದಲ್ಲಿ ಸ್ವಚ್ಛತೆ ಮಾಡಿ ಆಂದೋಲನ ಪ್ರಾರಂಭಿಸಲಾಗಿದೆ. ಕೇವಲ ಪುರಸಭೆಯ ಪೌರಕಾರ್ಮಿಕರು ಹಾಗೂ ಅಧಿಕಾರಿಗಳ ದಿನ ನಿತ್ಯದ ಸ್ವಚ್ಛತಾ  ಕೆಲಸದ  ಮದ್ಯ ನಾವು ಹಾಗೂ ಸಿಬ್ಬಂದಿಗಳು ಈ ಯೋಚನೆ ಮಾಡಿ ಆಂದೋಲನ ಪ್ರಾರಂಭಿಸಲಾಗಿದೆ. ಮೊದಲ ಪ್ರಯತ್ನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ  ಆನಂದ ಶಾಬಾದಿ ಅವರು ಹಾಗೂ ಇನ್ನೀತರ  ಪತ್ರಿಕಾ ಬಳಗದ ತಂಡ ನಮ್ಮೊಂದಿಗೆ ಆಂದೋಲನದಲ್ಲಿ  ಭಾಗಿಯಾಗಿರುವುದು ಮತ್ತಷ್ಟು ಹುಮ್ಮಸ್ಸು ತಂದಿದೆ. ಸಿಂದಗಿಯ ಪ್ರತಿಷ್ಠಿತ  ಸಂಸ್ಥೆಗಳು, ಸಂಘಟಕರು, ಹಾಗೂ ಸಿಂದಗಿಯ ಮಹಾಜನತೆ ಮುಂದಿನ  ಸ್ವಚ್ಛತಾ ಆಂದೋಲನದಲ್ಲಿ ಪ್ರತಿ ಸ್ವಚ್ಛತಾ ಆಂದೋಲನದಲ್ಲಿ ಒಂದು ಸಂಸ್ಥೆ  ಭಾಗಿಯಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಮನವಿ ಮಾಡಿಕೊಂಡರು.

ನಂತರ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ    ಜನರಿಗೆ ಅನುಕೂಲವಾಗುವ ಕೆಲಸ ಮಾಡುವುದಾದರೆ ಅವರೊಂದಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸದಾಕಾಲ ವಿರುತ್ತದೆ ಇಂತಹ ಕಾರ್ಯಗಳು ಪುರಸಭೆಯಿಂದ ಮತ್ತಷ್ಟು ಆಗಲಿ ನಮ್ಮ ಸಹಕಾರ ಸದಾಕಾಲ ವಿರುತ್ತದೆ ಎಂದು ಹೇಳಿದರು.

banner

ಬೆಳ್ಳಿಗೆ 8 ಗಂಟೆಯಿಂದ ಪ್ರಾರಂಭವಾದ  ಉದ್ಯಾನವನದ  ಸ್ವಚ್ಚತಾ ಕಾರ್ಯದಲ್ಲಿ ಪುರಸಭೆಯ ಸದಸ್ಯರಾದ ಶರಣಗೌಡ ಪಾಟೀಲ, ಮತ್ತು ಒಂದನೇ  ವಾರ್ಡಿನ ಸದಸ್ಯರ ಪ್ರತಿನಿಧಿಯಾದ ಗೋಲ್ಲಾಳಪ್ಪಗೌಡ ಮಾಗಣಗೇರಿ,  ಅಧಿಕಾರಿಗಳಾದ ಅಜೀತ  ಹಲಿಂಗಳ, ದಯಾನಂದ ಇವಣಿ, ಸಿದ್ದು ಅಂಗಡಿ, ಇಂದುಮತಿ ಮಣ್ಣೂರ, ಎನ್.ಎಚ್.ಉಸ್ತಾದ. ಅಜುರುದ್ಧಿನ್ ನಾಟೀಕಾರ. ಶಿವು ಬಡಿಗೇರ, ಮಲ್ಲು ಮೂಲಿ ಪೌರಕಾರ್ಮಿಕರ ವಿಭಾಗದ   ಅನೀಲ ಚೌರ,  ಅಂಬಣ್ಣ ಕೂಚಬಾಳ,  ಮರೇವ್ವ ದೊಡಮನಿ, ರೇಣುಕಾ ಚೌರ, ರಾಜಶ್ರೀ ಮಾಣಸುಣಗಿ, ಯಲ್ಲವ್ವ ಎಮ್ಮಿ, ರೇಣುಕಾ ದೊಡಮನಿ, ರೇಣುಕಾ ಬಡಿಗೇರ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಾದ ರಮೇಶ ಹೂಗಾರ, ಸುದರ್ಶನ ಜಂಗಾಣ್ಣಿ, ಮಹಾಂತೇಶ ನೂಲನವರ, ಗುರು ಮಠ, ಗುಂಡು ಕುಲಕರ್ಣಿ, ಹಾಗೂ ಇತರ ಪುರಸಭೆ ಸಿಬ್ಬಂದಿ ವರ್ಗ ಹಾಗು ನಗರದ  ಸಂಗಡಿಗರು ಭಾಗಿಯಾದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news