Home News ಲೋಕಾಯುಕ್ತ ಅಧಿಕಾರಿಗಳಿಂದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

ಲೋಕಾಯುಕ್ತ ಅಧಿಕಾರಿಗಳಿಂದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

by vegadhut@gmail.com.
0 comments

ಸಿಂದಗಿ :ವಿಜಯಪುರದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ವತಿಯಿಂದ ಸಿಂದಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಆರಕ್ಷಕ ಆನಂದ ಠಕ್ಕೆಣ್ಣನವರ ಪ್ರತಿಜ್ಞಾವಿಧಿ ಭೋದಿಸಿದರು.

ಪ್ರತಿ ನಾಗರಿಕರು ಇದರ ಬಗ್ಗೆ ಜಾಗರೂಕರಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಬೇಕೆಂಬ ಉದ್ದೇಶದಿಂದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರದ ವಿರುದ್ಧ ದೃಢ ಸಂಕಲ್ಪ ಮಾಡಬೇಕು ಎಂದು ಲೋಕಾಯುಕ್ತ ಅಧೀಕ್ಷಕ ಆನಂದ ಠಕ್ಕೆಣ್ಣನವರ ಹೇಳಿದರು.
ನಗರದ ತಹಶೀಲ್ದಾರ್ ಆವರಣದಲ್ಲಿ ಜರುಗಿದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅವರು, ಕಛೇರಿಗೆ ಬರುವ ನಾಗರಿಕರಿಗೆ ಉತ್ತಮ ಸೌಲಭ್ಯ ವದಗಿಸಲು ಸಹಕರಿಸಬೇಕಾಗಿದೆ. ನೀವು ನಿಮ್ಮ ಕರ್ತವ್ಯ ನಿಷ್ಠೆಯಿಂದ ನಿರ್ವಹಿಸಿದರೆ ನಮ್ಮ ಕಛೇರಿಯ ಅವಶ್ಯಕತೆ  ಜನಸಾಮಾನ್ಯರು ಬರುವುದು ನಿಲ್ಲಿಸುತ್ತಾರೆ. 2016ರಿಂದ ಕೆಲಸಗಳು ಬಾಕಿ ಉಳಿದಿವೆ, ಒಂದು ಕೆಲಸಕ್ಕೆ 25ಬಾರಿ ಕಛೇರಿಗೆ ಅಲೆದಾಡುವ ಪರಿಸ್ಥಿತಿ ಜನಸಾಮಾನ್ಯರದ್ದಾಗಿದೆ. ನಮ್ಮಗೆ ದೂರು ಬಂದರೆ ನಿಮ್ಮಗೆ ತೊಂದರೆ ನಿಮ್ಮ ಮೇಲೆ ದೂರು ಬರದೆ ಇರುವ ಹಾಗೆ ಕಾರ್ಯನಿರ್ವಹಿಸುತ್ತಿರಿ ಎಂಬ ನಂಬಿಕೆ ಇದೆ ಎಂದರು.
ಸರಕಾರಿ ನೌಕರರಾದ ನಾವು ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ತರಲು ನಿರಂತರ ಶ್ರಮಿಸುತ್ತೇವೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಕಾರ್ಯಶೀಲರಾಗುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ನಾಡಿನ ಜನತೆಗೆ ಮೌಲ್ಯಾಧಾರಿತ ಸೇವೆ ಒದಗಿಸುತ್ತೇವೆ ಹಾಗೂ ಶುದ್ಧ ಅಂತಃಕರಣದಿಂದ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅಧಿಕಾರಿ, ನೌಕರರಲ್ಲಿ ಪ್ರಮಾಣ ವಚನ ಭೋದಿಸಿದರು.

 

banner

ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಹಾಗೂ ತಾ. ಪಂ. ಇಓ ಬಾಬು ರಾಠೋಡ ಮಾತನಾಡಿ, ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ ಎಂಬ ಘೋಷವ್ವಾಖ್ಯದೊಂದಿಗೆ ಕರ್ನಾಟಕ ಸರಕಾರದ ವತಿಯಿಂದ ಪ್ರತಿ ವರ್ಷ ಅ.26ರಿಂದ ನ. 2ರ ವರೆಗೆ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ/ಅರಿವು ಸಪ್ತಾಹ ಆಚರಣೆ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಪ್ರತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಚೇರಿಯ ಸಿಬ್ಬಂದಿ, ಸಾರ್ವಜನಿಕರಿಗೆ ಅರಿವು ಮೂಡಿಸುವಂತದ್ದು, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿರುವುದನ್ನು ಸ್ವಯಂ ಅನುಸರಿಸಿ, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಪ್ರಕಾಶ ಸಿಂದಗಿ, ಸುರೇಶ ಮ್ಯಾಗೇರಿ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ,  ಲೋಕಾಯುಕ್ತ ಪೊಲೀಸ್ ಹವಾಲ್ದಾರ್ ಪ್ರಕಾಶ್ ತಗ್ಗೇಳ್ಳಿ ಆನಂದ ಪಡಶೆಟ್ಟಿ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news